ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ರಾಯಣ್ಣನ ಜಯಂತಿ

Lingaraj Badiger
Updated On : 7 Sept 2013, 11:36 am

ನರಗುಂದ:  ತಾಲೂಕಿನ ಕೊಣ್ಣೂರ ಗ್ರಾಮದ ಗ್ರಾಪಂ ರಂಗ ಮಂದಿರದಲ್ಲಿ ಸೆ. 7ರ ಬೆಳಗ್ಗೆ 11ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 217ನೇ ಜಯಂತ್ಯುತ್ಸವ ಹಾಗೂ ತಾಲೂಕು ಕನಕ ಯುವ ಸೇನೆಯ ಉದ್ಘಾಟನಾ ಸಮಾರಂಭ ಜರಗಲಿದೆ. ಸಾನ್ನಿಧ್ಯವನ್ನು ಮನಸೂರ-ಧಾರವಾಡ ಮಹಾಮಠದ ಬಸವರಾಜ ದೇವರು, ಕೊಣ್ಣೂರು ವಿರಕ್ತಮಠದ ಡಾ. ಶಿವಕುಮಾರ ಶ್ರೀಗಳು ವಹಿಸುವರು. ಅತಿಥಿಗಳಾಗಿ ಡಿ.ಕೆ. ಮುರಾರಿ, ಬಾಬಣ್ಣ ಹಿರೇಹೊಳಿ, ಕುರಬ ಸಮಾಜದ ರಾಜ್ಯ ಅಧ್ಯಕ್ಷ ಬಿ.ಎಂ. ಪಾಟೀಲ, ಅರವಿಂದ ದಳವಾಯಿ, ಆನಂದ ಅಪ್ಪುಗೋಳ, ದೇವರಾಜ ಪಾಟೀಲ, ಯಾಕೋಳ್ಳಿ, ಡಾ. ಎ.ಬಿ. ವಗ್ಗರ, ಸಂತೋಷ ಯಾವಗಲ್, ಉಮೇಶಗೌಡ ಪಾಟೀಲ, ಗಂಗಾಧರ ಮೇಟಿ, ಎಚ್.ಎಸ್. ಸೋಂಪುರ, ರಾಜು ಚಿಮ್ಮನಕಟ್ಟಿ, ಶಿವಾನಂದ ಮುತ್ತಣ್ಣವರ, ಶಿವಾನಂದ ಕರಿಗಾರ, ಬಿ.ಎಸ್. ಉಪ್ಪಾರ, ಜಿಪಂ ಸದಸ್ಯೆ ಶಾಂತಾ ದಂಡಿನ, ಗ್ರಾಪಂ ಅಧ್ಯಕ್ಷ ರತ್ನವ್ವ ತೋಟದ, ಸದಸ್ಯ ಭೀಮವ್ವ ಗೊಬ್ಬರಗುಂಪಿ, ಉಮೇಶ ಹಿರೇಹೊಳಿ ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ:  ನಗರದ ಕುಷ್ಟಗಿ ಚಾಳ, ಮಾನ್ವಿ ಚಾಳ, ಮಸುತಿ ಲೈನ್, ಗೂಳರೆಡ್ಡಿ ವಕೀಲ ಲೈನ್, ನವೋದಯ ಆಫೀಸ್ ಲೈನ್, ಹವಳದ ಲೈನ್, ಹೆಲ್ತ್‌ಕ್ಯಾಂಪ್ ಲೈನ್, ನರ್ಲೆಕರ ಲೈನ್, ಗಾಂಧಿ ನಗರ ಸಬ್ ಮುತಗಾರ ಲೈನ್, ಆಸಂಗಿ ಲೈನ್, ಕಟ್ಟಿಮನಿ ಲೈನ್, ಹನುಮಂತದೇವರ ಗುಡಿ ಲೈನ್, ಸಿಂದಗಿ ಲೈನ್, ಕಟ್ನಳಿ ಲೈನ್, ಹರಣಸಿಕಾರಿ ಲೈನ್, ಹಳ್ಳದ ಲೈನ್, ಬಟ್ಕೂಳ ಚಾಳ್, ಶಾಲೆ ಲೈನ್, ಎಂಪ್ಲಾಯಮೆಂಟ್ ಲೈನ್, ಮಿಶೆನ್ ಕಾಂಪೌಂಡ ಭಾಗ 1, 2 ವರಗೆ, ಅಂಬಾಭವಾನಿ ಸರ್ಕಲ್ ಲೈನ್, ಬೋಜಗಾರ ಲೈನ್, ರೇವಿಂಗಟನ್ ರೋಡ್, ವಿದ್ಯಾರಣ್ಯ ರೋಡ್ 1 ಭಾಗ, ವಿಜ್ಜು ಕಬಾಡಿ ಲೈನ್‌ದಿಂದ ಹೂಸಪೇಟ್ ಚೆಕ್ಕ್‌ವರೆಗೆ, ಎಸ್‌ಎಂಕೆ ನಗರದಿಂದ ಇರಾನಿ ಲೈನ್, ಮಹೇಂದ್ರಕರ ಲೈನ್, ತಟ್ಟಿ ಲೈನ್, ಮಾದಗುಂಡಿ ಲೈನ್, ಹನುಮಂತದೇವರ ಗುಡಿ ಲೈನ್, ರೋಟರಿ ಶಾಲೆ ಲೈನ್, ರಾಘನ್ ಲೈನ್, ಬಸಣ್ಣ ಲೈನ್, ವಸಂತ ಲೈನ್, ಸಂತೋಷ ಲೈನ್, ಕೂಡ್ಲಿವಾಡ ಲೈನ್, ಗಂಗಾವತಿ ಲೈನ್, ಬಿ.ಡಿ. ಕಾರ್ಮಿಕರ ಲೈನ್, 12ನೇ ನಂ. ಶಾಲೆ ಲೈನ್, ಅಡ್ಡೆದ ಲೈನ್, ಮಠದ ಲೈನ್, ಅಕ್ಕಿ ಲೈನ್, ಹಾಸ್ಟೆಲ್ ಲೈನ್ ಈ ಭಾಗಗಳಲ್ಲಿ ಶನಿವಾರ ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement