ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧಾರ್ಮಿಕ ಆಚರಣೆಗಳಿಂದ ಸೌಹಾರ್ದತೆ: ಹಿರೇಮಠ

Lingaraj Badiger
Updated On : 7 Sept 2013, 11:36 am

ಗಜೇಂದ್ರಗಡ:  ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ ಹೆಚ್ಚಿಸುವ ಜತೆಗೆ ಭಾತೃತ್ವದ ಕೊಂಡಿ ಗಟ್ಟಿಗೊಳ್ಳಲು ಸಹಕಾರಿಯಾಗುತ್ತವೆ ಎಂದು ಶಿವಶರಣಯ್ಯ ಹಿರೇಮಠ ಹೇಳಿದರು. ಅವರು ಈಚೆಗೆ ಸಮೀಪದ ವೀರಾಪುರ ಗ್ರಾಮದಲ್ಲಿ ಶರಣ ಬಸವೇಶ್ವರ ಪುರಾಣ ಮಂಗಲ ಹಾಗೂ ಜಗಜ್ಯೋತಿ ಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಪರಸ್ಪರ ನಂಬಿಕೆ ವಿಶ್ವಾಸ ಸಹೋದರತ್ವ ಭಾವನೆಗಳು ವೃದ್ಧಿಗೊಳ್ಳುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ವರೂ ಕಾಯಕ ಜ್ಞಾನ ಹಾಗೂ ಏಕತಾ ಮಂತ್ರದ ತಳಹದಿಯ ಮೇಲೆ ಬದುಕಿದಾಗ ಜೀವನ ಮೌಲ್ಯ ಕಾಣಲು ಸಾಧ್ಯ ಎಂದರು.  ಉಪನ್ಯಾಸಕ ರಮೇಶ ಮರಾಠಿ ಮಾತನಾಡಿ, ಬಸವಾದಿ ಶರಣರು ತಮ್ಮ ಸ್ವಾರ್ಥ ಹಿತಾಸಕ್ತಿ ತ್ಯಾಗ ಮಾಡಿ ಆಧ್ಯಾತ್ಮಿಕ ತಳಹದಿ ಮೂಲಕ ಸಮಾಜದಲ್ಲಿನ ಕಲ್ಮಷ ತೊಳೆದು ವೈಚಾರಿಕತೆಯ ಬದುಕಿಗೆ ದಾರಿ ದೀಪವಾಗಿದ್ದಾರೆ. ಅಂತಹ ಮಹಾಮಹಿಮರ ಆಧ್ಯಾತ್ಮ ಚಿಂತನೆ ರೂಢಿಸಿಕೊಂಡು ಸಮಾಜದ ಅಂಕು ಡೊಂಕು ತಿದ್ದಿ ಮನುಕುಲದ ಒಳಿತಿಗೆ ಶ್ರಮಿಸಿದಾಗ ಧಾರ್ಮಿಕ ಆಚರಣೆಗಳು ಸಾರ್ಥಕಗೊಳ್ಳುತ್ತವೆ ಎಂದರು. ಚೈತ್ರಾ ಮೇಲೋಡಿಸ್ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು. ಭೀಮಪ್ಪ ಕಿಲ್ಲೇದಾರ, ನ್ಯಾಯವಾದಿ ಶ್ರೀಕಾಂತ ಅವಧೂತ, ಮುತ್ತಣ್ಣ ಅವಧೂತ, ಭೀಮಪ್ಪ ಘೋರ್ಪಡೆ, ರಾಜು ಘೋರ್ಪಡೆ ಮುಂತಾದವರು ಉಪಸ್ಥಿತರಿದ್ದರು.
ನಾಳೆ ಪತ್ರಿಕೆ ಬಿಡುಗಡೆ
ಗದಗ:  ಸೆ. 8ರ ಬೆಳಗ್ಗೆ 10.30 ಗಂಟೆಗೆ ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಗೋರ ಬಂಜಾರಾ ವಾಣಿ ಮಾಸಪತ್ರಿಕೆಯ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ಬಿಜಾಪುರದ ಸೋಮದೇವನಹಟ್ಟಿ ದುರ್ಗಾದೇವಿ ಆಸ್ಥಾನದ ಜಗನು ಮಹಾರಾಜ ವಹಿಸುವರು. ಉದ್ಘಾಟನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಪತ್ರಿಕೆ ಬಿಡುಗಡೆಯನ್ನು ಶಾಸಕ ಬಿ. ಶ್ರೀರಾಮುಲು ನೆರವೇರಿಸುವರು. ಅಧ್ಯಕ್ಷತೆಯನ್ನು ಕವಿವಿ ಭೌತವಿಜ್ಞಾನಿ ಡಾ. ಎಲ್.ಆರ್.ನಾಯಕ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಶಾಸಕ ರುದ್ರಪ್ಪ ಲಮಾಣಿ, ಜಿಪಂ ಸದಸ್ಯೆ ಶಾರದಾ ತೋಟದ, ಕೃಷ್ಣಾ ಚವ್ಹಾಣ, ರಾಘವೇಂದ್ರ ನಾಯಕ, ಸಿ.ಪಿ. ಬೊಮ್ಮನಪಾಡ, ಡಾ. ಕೆ. ರಾಠೋಡ, ಡಿಎಸ್‌ಪಿ ಡಿ.ಡಿ. ಮಾಳಗಿ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಅಕ್ರಮ ಸಾರಾಯಿ ವಶ
ಗದಗ:  ಜಿಲ್ಲೆಯ ಗಜೇಂದ್ರಗಡ ಕುಷ್ಟಗಿ ರಸ್ತೆಯಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗಜೇಂದ್ರಗಡದ ನಿವಾಸಿಗಳಾದ ವಿನೋದ ಪಾಟೀಲ, ವಿಠ್ಠಲಸಾ ಪವಾರ ಬಂಧಿತ ವ್ಯಕ್ತಿಗಳು, ಬಂಧಿತರಿಂದ ರು. 1680 ಮೌಲ್ಯದ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement