ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಜ್ ಯಾತ್ರಾರ್ಥಿಗಳಿಗೆ ಇಂದಿನಿಂದ ತರಬೇತಿ

Lingaraj Badiger
Updated On : 7 Sept 2013, 11:48 am

ಗದಗ: ರಾಜ್ಯ ಹಜ್ ಸಮಿತಿ ಮತ್ತು ಭಾರತೀಯ ಹಜ್ ತರಬೇತಿ ವೇದಿಕೆಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಹಜ್ ಯಾತ್ರಾರ್ಥಿಗಳಿಗೆ 2 ದಿನಗಳ ಕಾಲ ತರಬೇತಿ ನೀಡುವ ಕಾರ್ಯಾಗಾರವು ಸೆ. 7 ಹಾಗೂ 8ರಂದು ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ನಡೆಯಲಿದೆ. ಧಾರವಾಡ ಜಿಲ್ಲೆಯ 293, ಬಾಗಲಕೋಟೆ ಜಿಲ್ಲೆಯ 171, ಗದಗ ಜಿಲ್ಲೆಯ 59 ಹಾಗೂ ಖಾಸಗಿ ಟ್ರಾವೆಲ್ಸ್ ಮೂಲಕ ಯಾತ್ರೆ ಕೈಗೊಳ್ಳಲಿರುವ 83 ಯಾತ್ರಾರ್ಥಿಗಳು ಸೇರಿದಂತೆ ಒಟ್ಟು 606 ಹಜ್ ಯಾತ್ರಿಕರು ಈ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ. 7ರಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಳ್ಳುವ ತರಬೇತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗದುಗಿನ ಆಝಾದ್ ಕೋ-ಆಪ್ ಬ್ಯಾಂಕ್‌ನ ಚೇರ್‌ಮನ್ ಸರಫರಾಜ ಉಮಚಗಿ ವಹಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲರು ಆಗಮಿಸುವರು. ಸೆ. 8ರ ಸಂಜೆ 5 ಗಂಟೆಗೆ ನಡೆಯುವ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ಸರಫರಾಜ ಉಮಚಗಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ರು. 20 ಲಕ್ಷ ಮೌಲ್ಯದ ವಸ್ತು ಬೆಂಕಿಗೆ ಆಹುತಿ
ಗದಗ: ಪಾರ್ಸಲ್ ತುಂಬಿಕೊಂಡು ತೆರಳುತ್ತಿದ್ದ ಲಾರಿಯೊಂದರ ಟೈರ್ ಬ್ಲಾಸ್ಟ್ ಆಗಿ ಆಕಸ್ಮಿಕವಾಗಿ ಬೆಂಕಿ ತಾಗಿದ ಪರಿಣಾಮ ವಾಹನದಲ್ಲಿದ್ದ ಸುಮಾರು ರು. 20 ಲಕ್ಷ ಮೌಲ್ಯದ ಸಾಮಾನುಗಳು ಸುಟ್ಟಿರುವ ಘಟನೆ ಜಿಲ್ಲೆಯ ಗದಗ ಹಳ್ಳಿಕೇರಿ ಮತ್ತು ಹಳ್ಳಿಗುಡಿ ದಾರಿ ಮಧ್ಯದಲ್ಲಿ ಸಂಭವಿಸಿದೆ. ಬೆಂಗಳೂರಿನಿಂದ ಗದಗ ಮಾರ್ಗವಾಗಿ ಬಾಗಲಕೋಟೆಗೆ ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement