ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪೂರ್ಣಗೊಂಡ ಮನೆಗಳಿಗೆ ಅನುದಾನ ನೀಡಿ: ಮನವಿ

Vishwanath S
Updated On : 8 Sept 2013, 11:36 am

ಗದಗ: ತಾಲೂಕಿನ ಸಂಭಾಪುರ ಗ್ರಾಮವು ಹಾತಲಗೇರಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿದ್ದು, 2010-11ನೇ ಸಾಲಿನಲ್ಲಿ ಮಂಜೂರಾದ ವಿವಿಧ ವಸತಿ ಯೋಜನೆಗಳ 4ನೇ ಹಂತದ ಮನೆಗಳು ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕಿದ್ದರೂ ಸರ್ಕಾರ ಮಾತ್ರ ಅವುಗಳಿಗೆ ನೀಡಬೇಕಾದ ಅನುದಾವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಆರೋಪಿಸಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಫಲಾನುಭವಿಗಳಾದ ಅಲ್ಲಾಭಿ ಪಿಂಜಾರ, ಮರಿಂಬವ್ವ ಪಿಂಜಾರ, ಮಹಾಲಕ್ಮೀ ಪೂಜಾರ, ಲಕ್ಷ್ಮವ್ವ ಅಬ್ಬಿಗೇರಿ, ಯಂಕವ್ವ ಅಬ್ಬಿಗೇರಿ, ಲಕ್ವ್ಮವ್ವ ಸೂಲಿ, ನೀಲವ್ವ ಬಂಡಿ ಹಾಜರಿದ್ದರು.
ಪ್ರತಿ ಮಗುವಿನಲ್ಲಿ ರಾಷ್ಟ್ರದ ಭವಿಷ್ಯ ಕಾಣಿರಿ: ನೆಗಳೂರ
ಲಕ್ಷ್ಮೇಶ್ವರ: ಮಗುವಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿ ಆ ವಿದ್ಯಾರ್ಥಿ ತನ್ನ ಜೀವನದಲ್ಲಿ ಯಶಸ್ವಿ ಭವಿಷ್ಯ ನಿರ್ಮಾಣ ಮಾಡಿಕೊಂಡಾಗ ಶಿಕ್ಷಕನ ಕರ್ತವ್ಯ ಪೂರ್ಣವಾದಂತೆ ಎಂದು ಮುಖ್ಯ ಶಿಕ್ಷಕ ಎನ್.ಎನ್.      ನೆಗಳೂರ ಹೇಳಿದರು.
ಶುಕ್ರವಾರ ಸಮೀಪದ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರೌಢಶಾಲೆಯ ದೈಹಿಕ ಶಿಕ್ಷಕ ಕೆ.ಆರ್. ಲಮಾಣಿ ಅವರು 2013ನೇ ಸಾಲಿನ ಗದಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಿಮಿತ್ತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಕರು ಪ್ರತಿ ಮಗುವಿನಲ್ಲಿ ರಾಷ್ಟ್ರದ ಭವಿಷ್ಯ ಕಾಣಬೇಕು ಎಂದರು. ಮುಖ್ಯಶಿಕ್ಷಕಿ ಆರ್.ಬಿ. ಮಟ್ಟಿ, ಬಿ.ಬಿ. ಬಳಗಾರ ಮಾತನಾಡಿದರು. ಶಿಕ್ಷಕ ಬಿ.ಕೆ. ಕಾಳಪ್ಪನವರ, ಸಿ.ಬಿ. ಮೊಗಲಿ, ಬಿ.ಬಿ. ಚಿಟಗಿ, ಆರ್.ಎಂ. ಜಂಬೇರಾಳ, ಆರ್.ಎಸ್. ಬೆಟಗೇರಿ, ಎಂ.ಕೆ. ಮಾದನಹಳ್ಳಿ, ಎಸ್.ವೈ. ನವಲಗುಂದ, ಬಿ.ಎಸ್. ಬೊಮ್ಮನಹಳ್ಳಿ, ಈರಣ್ಣ ಗಾಣಿಗೇರ, ಎಲ್.ಪಿ. ಲಮಾಣಿ, ಹಾಜರಿದ್ದರು. ಕೃಷ್ಣಪ್ರಸಾದ ಎಸ್. ನಿರೂಪಿಸಿದರು. ಎ.ವಿ. ಪವಾಡದ ವಂದಿಸಿದರು.
ಇಂದು ಹೇಮಂತಗೌಡಗೆ ಶ್ರೇಷ್ಠ ವರ್ತಕ ಪ್ರಶಸ್ತಿ ಪ್ರದಾನ
ಮುಂಡರಗಿ: ಪಟ್ಟಣದ ಇಂಡಿಯನ್ ಆಯಿಲ್ ಡಿಲರ್ಸ್‌ನ ವಿತರಕ, ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹೇಮಂತಗೌಡ ಪಾಟೀಲ ಅವರು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಕೊಡಮಾಡುವ 2013-14ನೇ ಸಾಲಿನ ಶ್ರೇಷ್ಠ ವರ್ತಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆ. 8ರಂದು ಗದಗ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಮುಂಡರಗಿ ತಾಲೂಕು ಯುವ ಕಾಂಗ್ರೆಸ್‌ನ ಸದಸ್ಯರಾಗಿ, ಅಧ್ಯಕ್ಷರಾಗಿ 1996 ರಿಂದ 2008ರ ವರೆಗೆ ಕಾರ್ಯನಿರ್ವಹಿಸಿ, 2010ರಿಂದ ಮುಂಡರಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು 1993-94ರಲ್ಲಿ ಮುಂಡರಗಿ ನಗರದ ರೋಟರ್ಯಾಕ್ಟ್ ಕ್ಲಬ್ ಸದಸ್ಯರಾಗಿ, ನಿರ್ದೇಶಕರಾಗಿ 2005ರಿಂದ 2008ರ ವರೆಗೆ ಕರ್ನಾಟಕ ಸರ್ಕಾರದ ರಾಜ್ಯ ತಾಳೆ ಬೆಳೆ ದರ ನಿಗದಿ ಸಮಿತಿಯ ನಿರ್ದೇಶಕರಾಗಿ, 2011ರಲ್ಲಿ ಮುಂಡರಗಿಯಲ್ಲಿ ನಡೆದ ಮುಂಡರಗಿ ಉತ್ಸವ ಸಮಿತಿಯ ಉಪಾಧ್ಯಕ್ಷರಾಗಿ, ಪ್ರಸ್ತುತ ವರ್ಷ ಮುಂಡರಗಿಯಲ್ಲಿ ನಡೆದ ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಸುಗಮ ಸಂಗೀತ ಕಾರ್ಯಕ್ರಮ
ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಸಣ್ಣಕೈಗಾರಿಕಾ ಕೇಂದ್ರ ಗದಗ ಇವರ ಆಶ್ರಯದಲ್ಲಿ ಜ. ತೋಂಟದಾ ರ್ಯ ಕಲ್ಯಾಣ ಮಂಟಪದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನ, ಮಾರಾಟ ಮೇಳದಲ್ಲಿ ಪೂಜಾ ಬೇವೂರ ಅವರ ಸುಗಮ ಸಂಗೀತ ಕಾರ್ಯಕ್ರಮ  ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement