ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹದಗೆಟ್ಟ ಸೇತುವೆ, ರಸ್ತೆ ಪರಿಶೀಲಿಸಿದ ಪಾಟೀಲ

Vishwanath S
Updated On : 8 Sept 2013, 11:35 am

ಕನ್ನಡಪ್ರಭ ವಾರ್ತೆ, ಗದಗ, ಸೆ. 7
ಕೆಲವು ದಿನಗಳ ಹಿಂದೆ ಸುರಿದ ಅಲ್ಪಮಳೆಗೆ ರಸ್ತೆಗಳು ಕೊಚ್ಚಿಹೋಗಿದ್ದ ಕೋಟುಮಚಗಿ-ಚುರ್ಚಿಹಾಳ, ಕೋಟುಮಚಗಿ-ತಿಮ್ಮಾಪುರ ರಸ್ತೆಯ ಸೇತುವೆ, ಪರ್ಸಿಗಳು ಸೇರಿದಂತೆ ಹದಗೆಟ್ಟ ರಸ್ತೆಯನ್ನು ಶಾಸಕ ಜಿ.ಎಸ್.ಪಾಟೀಲ ಶನಿವಾರ ಪರಿಶೀಲಿಸಿ, ತುರ್ತು ಕಾಮಗಾರಿಗೆ ಸೂಚಿಸಿದರು.
ಕೊಚ್ಚಿಹೋಗಿದ್ದ ಸೇತುವೆ, ಪರ್ಸಿ, ಹದಗೆಟ್ಟ ರಸ್ತೆಯ ಬಗ್ಗೆ 'ಕನ್ನಡಪ್ರಭ' ಸೆ. 6ರಂದು ಮಳೆಗೆ ಕೊಚ್ಚಿಹೋದ ರಸ್ತೆ, ಸೇತುವೆ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿಗೆ ಸ್ಪಂದಿಸಿದ ಶಾಸಕ ಜಿ.ಎಸ್. ಪಾಟೀಲ ಶನಿವಾರ ಕೋಟುಮಚಗಿ ಗ್ರಾಮದ ತಿಮ್ಮಾಪುರ ಹಾಗೂ ಚುರ್ಚಿ   ಹಾಳ (ಕಣಗಿನಹಾಳ) ರಸ್ತೆಯಲ್ಲಿನ           ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ, ಈ ಕುರಿತು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಾಳೆಯಿಂದಲೇ ತುರ್ತು ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ಕೋಟುಮಚಗಿ-ತಿಮ್ಮಾಪುರ ರಸ್ತೆಯಲ್ಲಿರುವ ಹುಲಬಿ ಹಳ್ಳಕ್ಕೆ ನಿರ್ಮಿಸಿರುವ ಪರ್ಸಿಯು ಅತಿ ಚಿಕ್ಕದಾಗಿದೆ. ಇಲ್ಲಿ ಸಾವಿರಾರು ಎಕರೆ ಜಮೀನುಗಳ ನೀರು ಈ ಹಳ್ಳದ ಮೂಲಕ ಹಾಯ್ದುಹೋಗುತ್ತದೆ. ಹೀಗಾಗಿ ಇಲ್ಲೊಂದು ದೊಡ್ಡದಾದ ಸೇತುವೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ಈ ಕಳಪೆ ಕಾಮಗಾರಿ ಕುರಿತು ಜಿಪಂ   ಸಿಇಓ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ದುರಸ್ತಿಗೆ ಬೇಕಾದ ಅಗತ್ಯ ಅನುದಾನ ಕೂಡಲೇ ಬಿಡುಗಡೆಗೊಳಿಸುವಂತೆ ಸೂಚಿಸಿದರು.
ಜಿಪಂ ಅಭಿಯಂತರ ಸುದರ್ಶನ್, ಪಿಬ್ಲ್ಯುಡಿ ಅಭಿಯಂತರ ಬಳ್ಳಾರಿ, ಚಾಟೆ, ಗ್ರಾಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ತಾಪಂ ಮಾಜಿ ಸದಸ್ಯ ಪ್ರಕಾಶ ಮುಧೋಳ, ಗ್ರಾಪಂ ಸದಸ್ಯ ಮಲ್ಲಪ್ಪ ಕಿತ್ತೂರ, ಶರಣಪ್ಪ ಮ್ಯಾಗೇರಿ, ಈರಣ್ಣ ಬಾಚಲಾಪುರ, ಶರಣಪ್ಪ ಮ್ಯಾಗೇರಿ, ಮಾರುತಿ ಪೂಜಾರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement