ಅಂತರಂಗ ಶುದ್ಧಿಗೆ ಪ್ರವಚನ ಮಹಾಬೆಳಕು
ಗದಗ: ಜ್ಞಾನದ ಬುತ್ತಿಯನ್ನು ನಿತ್ಯದ ಕಾಯಕದಲ್ಲಿ ಬಿಚ್ಚಿ ಊಟ ಮಾಡುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಬೂದೀಶ್ವರ ಮಠದ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಹರ್ತಿ ಗ್ರಾಮದ ಬಸವ ಪ್ರವಚನ ಸೇವಾ ಸಮಿತಿ ಹಾಗೂ ನಾಗರಿಕರ ವತಿಯಿಂದ ಶ್ರಾವಣ ಮಾಸದ ನಿಮಿತ್ತ ನಡೆದ ಜೀವನ ಮೌಲ್ಯಗಳ ಪ್ರವಚನ ಮಾಲಿಕೆಯ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಧರ್ಮಕ್ಕೆ ಬದ್ಧನಾಗಿ ಸಾಧನೆಗೆ ಸಿದ್ಧನಾಗಿ ಛಲದಿಂದ ಬದುಕು ಸಾಗಿಸಬೇಕು. ಧರ್ಮವನ್ನು ನಾವು ರಕ್ಕಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದ ಶ್ರೀಗಳು, ಅಂತರಂಗ ಶುದ್ಧಿಗೆ ಪ್ರವಚನ ಮಹಾಬೆಳಕು ಎಂದರು. ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಪ್ರಭು ಹುಡೇದ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮಲ್ಲನಗೌಡ ಪಾಟೀಲ, ಎಸ್.ಎಪ್. ಹಳ್ಳಿಕೇರಿ, ಎ.ವಿ. ಪ್ರಭು, ಸಿ.ವಿ. ಪಾಟೀಲ, ಪರಶುರಾಮ ಹಡಪದ, ಎಂ.ಸಿ. ಪಾಟೀಲ, ಅಶೋಕ ಅಂಗಡಿ, ದೇವೇಂದ್ರಪ್ಪ ರಡ್ಡೇರ, ಜೆ.ವಿ. ಲದ್ದಿ, ಎಸ್.ಆರ್. ಬಂಡಿವಡ್ಡರ, ನಾಗರಾಜ ಕಮ್ಮಾರ, ಎಂ.ಸಿ. ಪಾಟೀಲ. ಎಂ.ಎನ್. ಸೋಮರಡ್ಡಿ, ರುದ್ರಪ್ಪ ಹೋನ್ನಪ್ಪನವರ, ಪ್ರಭು ಲಿಂಗದಾಳ, ಗೂಳಪ್ಪ ರಡ್ಡೇರ, ಸುಭಾಸ ಬಡಿಗೇರ, ಗೂಳಪ್ಪ ಗುಡದೂರ, ಬಿ.ಟಿ. ಸೋಮರಡ್ಡಿ, ಬಿ.ಬಿ. ಹೊನ್ನಪ್ಪನವರ, ವಸಂತ ರಡ್ಡೇರ, ನಾಗರಾಜ ಕಮ್ಮಾರ, ಎ.ಎಸ್. ಕೊಟ್ಟೂರಶೆಟ್ಟರ್, ಸಿದ್ದು ಬೋಕಿ, ಅರ್ಜುನ ಕುರ್ತಕೋಟಿ ಮುಂತಾದವರು ಹಾಜರಿದ್ದರು.
ಬೆಳಗ್ಗೆ 9ಕ್ಕೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮುತ್ತೈದಿಯರಿಂದ ಪೂರ್ಣ ಕುಂಭಮೇಳ ಹಾಗೂ ಭಜನೆ, ಡೊಳ್ಳು, ಜಾಂಜ್ ಹಾಗೂ ವಿವಿಧ ಮೇಳಗಳೊಂದಿಗೆ ಮುರಗಿಸ್ವಾಮಿ ಮಠದಿಂದ ಪ್ರಾರಂಭವಾಗಿ ಬಸವೇಶ್ವರ ದೇವಸ್ಥನದವರೆಗೆ ನಡೆಯಿತು. ಪ್ರಭು ಹುಡೇದ ಸ್ವಾಗತಿಸಿದರು. ಪಿ.ಎಸ್. ಪಾಟೀಲ ನಿರೂಪಿಸಿದರು. ಬಸಯ್ಯ ಕವಲೂರ ವಂದಿಸಿದರು.