ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದಿಂಡಿ ಉತ್ಸವ ಸಮಾರಂಭ

Rashmi Kasaragodu
Updated On : 9 Sept 2013, 12:25 pm

ಗಜೇಂದ್ರಗಡ: ಯುವ ಪೀಳಿಗೆ ಧಾರ್ಮಿಕ ಪರಂಪರೆ ಉಳಿವಿಗೆ ಮುಂದಾಗಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಸ್ಥಳೀಯ ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ಪಾಂಡುರಂಗ ದೇಗುಲದಲ್ಲಿ ಶನಿವಾರ ನಡೆದ ದಿಂಡಿ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳು ವಿರಳವಾಗುತ್ತಿವೆ. ಸಮುದಾಯದ ಹಿರಿಯರು ಕಾಲಕಾಲಾಂತರದಿಂದ ಉಳಿಸಿಕೊಂಡು ಬಂದಿರುವ ದೈವತ್ವದ ಮೇಲಿನ ನಂಬಿಕೆ ಅಪಾರವಾದುದ್ದು, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ವಿಜ್ಞಾನಕ್ಕೆ ಸವಾಲೆಸಗುವ ಹಲವಾರು ವಿಸ್ಮಯಗಳು ನಿತ್ಯ ನಡೆಯುತ್ತಲೇ ಇರುತ್ತವೆ. ಈ ದೆಸೆಯಲ್ಲಿ ಧಾರ್ಮಿಕ ಸಾಮಾಜಿಕ ಆಚರಣೆ ಚಿಂತನೆ ನಿರಂತರವಾಗಿರಬೇಕು ಎಂದರು. ಸಮಾಜ ಅಧ್ಯಕ್ಷ ಎ.ಡಿ. ಮಹೇಂದ್ರಕರ ಹಾಗೂ ಹರಿಭಕ್ತ ಪಂಡಿತರು ದಿಂಡಿ ಉತ್ಸವದ ಮಹಿಮೆ ಕುರಿತು ಮಾತನಾಡಿದರು. ಲಕ್ಷ್ಮಣರಾವ್ ಜ್ಞಾನಬೋಟೆ ಅವರಿಗೆ ತರುಣ ಸಂಘ ವತಿಯಿಂದ ಸನ್ಮಾನಿಸಲಾಯಿತು. ಪುರಸಭೆ ಮಾಜಿ ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಪುರಸಭೆ ಸದಸ್ಯ ಮಂಜುನಾಥ ಬಡಿಗೇರ, ಅಶೋಕ ವನ್ನಾಲ, ಕವಿತಾ ಜಾಲಿಹಾಳ, ಯಲ್ಲಪ್ಪ ಜ್ಞಾನಬೋಟೆ, ಡಾ. ಎ.ವಿ. ಕರ್ಣೆ, ಕೆ.ವೈ. ಮಾಂಡ್ರೇ, ಶ್ರೀಧರರಾವ್, ವಿಜಯಕುಮಾರ ಹಂಚಾಟೆ, ಬಾಬು ನಾವಡೇ ಇದ್ದರು. ಆರ್.ಎಸ್. ಅಂಬೋರೆ ಸ್ವಾಗತಿಸಿದರು. ಪಿ.ಪಿ. ಅಂಬೋರೆ ನಿರೂಪಿಸಿದರು. ಕೃಷ್ಣಾ ಅಂಬೋರೆ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement