ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿಕ್ಷಕರ ಕಾರ್ಯ ಶ್ಲಾಘನೀಯ: ಶ್ರೀ

Rashmi Kasaragodu
Updated On : 9 Sept 2013, 12:27 pm

ಗದಗ: ಚೇತನ ಕರಾಟೆ ಕ್ಲಬ್ ಶಾಖೆ ವಿಡಿಎಸ್ಟಿ ಆಶ್ರಯದಲ್ಲಿ ಈಚೆಗೆ ಶಿಕ್ಷಕ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಿಗೆ ಹಾಗೂ ಕರಾಟೆ ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು. ಕಪೋತಗಿರಿ ನಂದಿವೇರಿ ಮಠದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶಿಕ್ಷಕರ ದಿನಾಚರಣೆಯನ್ನು ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜ ಎಲ್ಲ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನ ಸಮಾರಂಭ ಕಾರ್ಯಕ್ರಮ ಶ್ಲಾಘನೀಯ ಎಂದರು.
ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಪ್ರೊ. ಐ.ಕೆ. ಕಮ್ಮಾರ ಸಮಾರಂಭ ಉದ್ಘಾಟಿಸಿದರು. ವ್ಯಾಪಾರಸ್ಥ ವಿಜಯಕುಮಾರ ಗಡ್ಡಿ, ಗದಗ ಶಹರ ಸಿಪಿಐ ಸಂತೋಷ ಪವಾರ, ಗಂಗಾಧರ ಹಿರೇಮಠ, ದೀಪಕ ಸುಲಾಖೆ, ವಿನೋದ ಅಕ್ಕಿ, ಡಾ. ದತ್ತು ವೈಕುಂಠೆ ಇದ್ದರು. ಬಿ.ಕೆ. ಚಿಕ್ಕನಗೌಡರ, ಬಿ.ಎಸ್. ಅಂಗಡಿ, ಎ.ಎಚ್. ಚನ್ನಶೆಟ್ಟಿ, ಎಸ್. ಯಂಕಂಚಿ, ಎಂ.ಎಸ್. ಕಣವಿ, ಮಂಜುನಾಥ ಹದ್ದಣ್ಣವರ, ಎಸ್.ಎಸ್. ಗೌಡರ, ಅಣ್ಣಪ್ಪ ಮರ್ಕಲ್, ಪರಶುರಾಮ ಹಬೀಬ, ಜಗದೀಶ ಅಡಿಗ, ಎ.ಎಸ್. ಮೆಣಸಗಿ, ಎಂ.ಎಸ್. ಕುರಿ, ಪಿ.ಎ. ಹೊಂಬಾಳಿ, ರಾಘು ಹುಲಕೋಟಿ, ಸಂತೋಷ ಹಾಲವಿ ಮುಂತಾದವರನ್ನು ಸನ್ಮಾನಿಸಲಾಯಿತು. ಕರಾಟೆಪಟುಗಳು ಕರಾಟೆ ಪ್ರದರ್ಶನ, ಅದರ ಸಾಕ್ಷ್ಯಿಚಿತ್ರ ಸಾದರಪಡಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement