ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಣಕಾಸು ಸಂಸ್ಥೆಗಳು ಜನರ ಸಮಸ್ಯೆಗೆ ಸ್ಪಂದಿಸಲಿ

Rashmi Kasaragodu
Updated On : 9 Sept 2013, 12:27 pm

ಗಜೇಂದ್ರಗಡ: ಹಣಕಾಸು ಸಂಸ್ಥೆಗಳು ಜನಸಾಮಾನ್ಯರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಸಂಸ್ಥೆ ಪ್ರಗತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ದಿ. ಲಕ್ಷ್ಮಿ ಅರ್ಬನ್ ಬ್ಯಾಂಕ್ ಕೋ-ಆಪರೇಟಿವ್ ಬ್ಯಾಂಕ್ನ ಸೇವಾ ಮನೋಭಾವನೆ ಶ್ಲಾಘನೀಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಸ್ಥಳೀಯ ಜಿ.ಕೆ. ಬಂಡಿ ಗಾರ್ಡ್ನನಲ್ಲಿ ಭಾನುವಾರ ನಡೆದ ದಿ. ಲಕ್ಷ್ಮಿ ಅರ್ಬನ್ ಕೋ-ಆಫರೇಟಿವ್ ಬ್ಯಾಂಕ್ನ ಶತಮಾನೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ಜನರ ಆರ್ಥಿಕ ಶಕ್ತಿಯ ಆಧಾರದ ಮೇಲೆ ಸಹಕಾರ ಕ್ಷೇತ್ರದ ಬೆಳವಣಿಗೆ ಸಾಧ್ಯ. ದೇಶದ ಜನತೆಯ ಆರ್ಥಿಕತೆಗೆ ತಕ್ಕಂತೆ ಅರ್ಬನ್ ಬ್ಯಾಂಕ್ಗಳು ಸ್ಥಾಪಿತಗೊಂಡಿವೆ ಎಂದರು.
ಸರ್ಕಾರಗಳು ಕೇವಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹರಿಸುವ ಮೂಲಕ ಅರ್ಬನ್ ಬ್ಯಾಂಕ್ಗಳಂತಹ ಸಹಕಾರಿ ಬ್ಯಾಂಕ್ಗಳಲ್ಲಿ ವ್ಯವಹಾರ ಮಾಡದಿರುವುದು ದುರದೃಷ್ಟಕರ. ಬರುವ ದಿನಗಳಲ್ಲಿ ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರದ ವ್ಯವಹಾರ ಈ ಸಂಸ್ಥೆಗಳಲ್ಲಿ ಮಾಡುವುದರಿಂದ ಜನರಲ್ಲಿ ವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದರು.
'ಶತಕ ಸಿರಿ' ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಸಹಕಾರವೇ ಸಂಪತ್ತಿನ ಹೆಬ್ಬಾಗಿಲು ಎಂಬ ಧ್ಯೇಯದೊಂದಿಗೆ ನೂರು ವರ್ಷದ ಹಿಂದೆ ಉದಯವಾದ ಲಕ್ಷ್ಮಿ ಅರ್ಬನ್ ಬ್ಯಾಂಕ್ ಈ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಸಾಕಾರವಾದ ಬ್ಯಾಂಕ್ ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಬ್ಯಾಂಕಿನ ನೂತನ ಎಪಿಎಂಸಿ ಶಾಖೆ ಉದ್ಘಾಟಿಸಿದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗಜೇಂದ್ರಗಡದ ಲಕ್ಷ್ಮಿ ಅರ್ಬನ್ ಬ್ಯಾಂಕ್ ಉತ್ತಮ ಆಡಳಿತ ಬದ್ಧತೆಯಿಂದ ಗ್ರಾಹಕರ ಹಿತ ಕಾಯುವಲ್ಲಿ ಯಶಸ್ವಿಯಾಗಿ, 100 ವರ್ಷ ಪೂರೈಸಿರುವುದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಲಕ್ಷ್ಮಿ ಅರ್ಬನ್ ಬ್ಯಾಂಕ್ ರೋಣ ಪಟ್ಟಣದಲ್ಲಿ ಶಾಖೆ ತೆರೆಯುವ ಆಸಕ್ತಿ ಹೊಂದಿದಲ್ಲಿ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದರು.
ಬ್ಯಾಂಕ್ ವತಿಯಿಂದ ಸಿಬಿಎಸ್ಇ ಶಾಲೆಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಉದ್ಘಾಟಿಸಿದರು. ಎಪಿಎಂಸಿ ಆವರಣದ ಹೊಸ ಶಾಖೆಯ ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಕಳಕಪ್ಪ ಬಂಡಿ ಉದ್ಘಾಟಿಸಿ ಮಾತನಾಡಿದರು. ಸಿದ್ಧ ಸಂಸ್ಥಾನ ಮಠ ಚಿಂಚಣಿ ಶಿರೋಳದ ಶ್ರೀ ಅಲ್ಲಮಪ್ರಭು ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬ್ಯಾಂಕ್ ಅಧ್ಯಕ್ಷ ಎಸ್.ಎಲ್. ಹಿರೇಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊತಬಾಳದ ಅರುಣೋದಯ ಕಲಾ ತಂಡದವರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.
ಹೊಳೆಆಲೂರ ಎಪಿಎಂಸಿ ಅಧ್ಯಕ್ಷ ಪರಶುರಾಮ ಹಂಡಿ, ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ, ಸಹಕಾರ ಸಂಘ ಉಪನಿಬಂಧಕ ಇಲಾಖೆಯ ಎಸ್.ಬಿ. ಕಡಿ, ಎಸ್.ಬಿ. ಹಿರೇಮಠ, ಶರಣಪ್ಪ ಕೊಟಗಿ, ವಿ.ಆರ್. ಗುಡಿಸಾಗರ, ವೀರಣ್ಣ ಸೊನ್ನದ, ಎಸ್.ಎಸ್. ಪಟ್ಟೇದ, ಪಿ.ಎಸ್. ಕಡಿ, ಪಿ.ಬಿ. ಮ್ಯಾಗೇರಿ, ಡಾ. ಬಿ.ವಿ. ಕಂಬಳ್ಯಾಳ, ಸಿದ್ಧಣ್ಣ ಬಂಡಿ, ಪಿ.ವೈ. ತಳವಾರ, ಎಸ್.ಯು. ಹುಬ್ಬಳ್ಳಿ, ಎಸ್.ಎಸ್. ಕೊಡೆಕಲ್, ಅನ್ನಪೂರ್ಣಮ್ಮ ಹೊನವಾಡ, ಬ್ಯಾಂಕ್ ವ್ಯವಸ್ಥಾಪಕ ರಾಜಶೇಖರ ಹೊಸಂಗಡಿ ಇನ್ನಿತರರು ಪಾಲ್ಗೊಂಡಿದ್ದರು.
ಸುರೇಶ ಚನ್ನಿ, ಸ್ವಾಗತಿಸಿದರು. ಜೈನರ ಬಾಹುಬಲಿ ನಿರೂಪಿಸಿದರು. ವಿರೇಶ ನಂದಿಹಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement