ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಧ್ಯಕ್ಷ, ಉಪಾಧ್ಯಕ್ಷರಅವಿರೋಧ ಆಯ್ಕೆ

Lingaraj Badiger
Updated On : 12 Sept 2013, 10:57 am

ಲಕ್ಷ್ಮೇಶ್ವರ:   ಸಮೀಪದ ಬಾಲೆಹೊಸೂರ ಗ್ರಾಪಂನ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಲತಿ ಬಾರ್ಕಿ ಹಾಗೂ ಉಪಾಧ್ಯಕ್ಷರಾಗಿ ಮುದಕಣ್ಣ ಒಂಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಫಕ್ಕಿರೇಶ ಮ್ಯಾಟಣ್ಣವರ, ನಿಂಗಪ್ಪ ಜಾಲವಾಡಗಿ, ಬಸವರಾಜ ಅರಳಿ, ಬಸವರಾಜ ನೀಲಣ್ಣವರ, ಬಸಮ್ಮ ಮಿಳ್ಳಿ, ಹಸ್ಮತ್‌ಬಾನು ಮುಲ್ಲಾನವರ, ಕಮಲವ್ವ ಬೆಳಗಲಿ, ಮೆಹಬೂಬಿ ಮಾಚೇನಹಳ್ಳಿ, ಚೆಂದ್ರಮ್ಮ ನಿಟ್ಟೂರ, ಆನಂದಸ್ವಾಮಿ ಮಾದಾಪುರಮಠ, ಪಿಡಿಓ ಎಸ್.ಎಫ್. ಹಿರೇಮಠ, ಕಾರ್ಯದರ್ಶಿ ಎಸ್.ಜಿ. ಮುದಕನಗೌಡರ, ಎಎಸ್‌ಐ ಬಡಿಗೇರ, ಬಸವರಾಜ ಗೂಳಣ್ಣವರ, ಶಿವು ಕಬ್ಬೇರ, ಅನಂತ ಕಟ್ಟಿಮನಿ, ಎನ್.ಎಂ. ಗದಗ, ಪುಟ್ಟಪ್ಪ ಗಾಣಿಗೇರ, ಮಹಾದೇವಪ್ಪ ತೋಟಗೇರ, ಯಲ್ಲಪ್ಪ ಸೂರಣಗಿ ಮುಂತಾದವರು ಉಪಸ್ಥಿತರಿದ್ದರು.
ಪುರಾಣ ಮಂಗಲೋತ್ಸವ
ಗಜೇಂದ್ರಗಡ: ಪಟ್ಟಣದ ವೀರಶೈವ ಸಮಾಜ ವತಿಯಿಂದ ಮೈಸೂರ ಮಠ (ಚೌಕಿಮಠ)ದಲ್ಲಿ ಶ್ರಾವಣ ಮಾಸ ಪ್ರಯುಕ್ತ ಜರುಗಿದ ಪ್ರಭುಲಿಂಗಲೀಲೆ ಪ್ರವಚನ ಮಹಾ ಮಂಗಲೋತ್ಸವ ಮಂಗಳವಾರ ನಡೆಯಿತು. ಪುರಾಣ ಮಹಾಮಂಗಲ ಪ್ರಯುಕ್ತ ಬೆಳಗ್ಗೆ ಪ್ರಭುಲಿಂಗ ದೇವರ ಭಾವಚಿತ್ರ ಜತೆಗೆ ಸಮುದಾಯದ ನೂರಾರು ಸುಮಂಗಲಿಯರು ಪ್ರಭುಲಿಂಗ ದೇವರ ವಚನ ಕಮ್ಮಟ ಹೊತ್ತು, ಸಕಲ ಮಂಗಲವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ವೀರಶೈವ ಸಮಾಜದ ಅಧ್ಯಕ್ಷ ಬಿ.ಎಂ. ಸಜ್ಜನರ, ಮಲ್ಲಿಕಾರ್ಜುನ ಹಿರೇಮನಿ, ಅಂಬರೇಶ ಅರಳಿ, ಮುತ್ತಣ್ಣ ಚಟ್ಟೇರ, ಗುರುಸಿದ್ಧಯ್ಯ ಸೂಗೀರಯ್ಯನಮಠ ಮುಂತಾದವರು ಉಪಸ್ಥಿತರಿದ್ದರು.
15ರಂದು ರಾಜ್ಯ ಮಟ್ಟದ ಸರ್ವಧರ್ಮ ವಧು-ವರರ ಸಮಾವೇಶ
ಗದಗ: ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ಹಾಗೂ ಗಣೇಶ ಅಸೋಸಿಯಟ್ಸ್ ವತಿಯಿಂದ ನಗರದಲ್ಲಿ ಸೆ. 15ರಂದು ಬೆಳಗ್ಗೆ 10ಕ್ಕೆ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಭಾಭವನದಲ್ಲಿ ರಾಜ್ಯಮಟ್ಟದ ಸರ್ವಧರ್ಮ ವಧು-ವರರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ರವಿ ಹಂದಿಗೋಳ ತಿಳಿಸಿದರು.  ಅವರು ಬುಧವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. 20 ವರ್ಷಗಳಿಂದ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ವಧು-ವರರ ಸಮಾವೇಶ ಜರುಗಿಸಲಾಗುತ್ತಿದ್ದು, 350ಕ್ಕೂ ಹೆಚ್ಚು ಸಮಾವೇಶ ಯಶಸ್ವಿಯಾಗಿ ಜರುಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೆ. 15ರಂದು ಬೆಳಗ್ಗೆ 10ರಿಂದ ಬೆಳಗ್ಗೆ 2ರ ವರೆಗೆ ಲಿಂಗಾಯತ ವೀರಶೈವ ಸಮಾಜದ ಒಳಪಂಗಡಗಳ ವಧು-ವರರ ಮತ್ತು ಪಾಲಕರ ಸಮಾವೇಶ ಹಾಗೂ ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ಸರ್ವಧರ್ಮಗಳ ವಧು-ವರರ ಸಮಾವೇಶ ಜರುಗಲಿದೆ ಎಂದರು. ಗಣೇಶ ಅಸೋಸಿಯೇಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ ಕರ್ಜಗಿ, ಲಲಿತಾ ನಂದಿಮಠ, ಮಮತಾ ನಾರಾಯಣಪೇಟೆ, ಶಕುಂತಲಾ ನಂದಿಮಠ, ನಾಗರಾಜ ಅಬ್ಬಿಗೇರಿ ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement