ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜೀವನದಲ್ಲಿ ಜಿಗುಪ್ಸೆಗೊಂಡ ತಾಪಂ ಅಧಿಕಾರಿ ಪತ್ರ ಬರೆದಿಟ್ಟು ನಾಪತ್ತೆ

Mainashree
Updated On : 12 Sept 2013, 12:40 pm

ಕ.ಪ್ರ.ವಾರ್ತೆ  ನರಗುಂದ  ಸೆ. 10
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ವ್ಯವಸ್ಥಾಪಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಕೆ. ಇನಾಮದಾರ ಸೆ.10ರಂದು ತಾಪಂ ಕಚೇರಿಯಲ್ಲಿ ತಾವು ಕುಳಿತು ಕೊಳ್ಳುವ ಟೇಬಲ್ ಮೇಲೆ ಜೀವನದಲ್ಲಿ ಜಿಗುಪ್ಸೆಗೊಂಡಿರುವ ಕುರಿತು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ.
“«Û«Úß ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ. ನಮ್ಮ ಕುಟುಂಬದ ಬೇಕು ಬೇಡಿಕೆ ಈಡೇರಿಸಲು ಸಾಧ್ಯವಾಗದ ಕಾರಣ ನೆಮ್ಮದಿ, ಸುಖ, ಸಂತೋಷ ಇಲ್ಲದ್ದರಿಂದ ನಾನು ಸುಖ, ಶಾಂತಿ ಸಿಗುವ ಜಾಗಕ್ಕೆ ಹೋಗುತ್ತಿದ್ದೇನೆ. ಆದ್ದರಿಂದ ನನ್ನನ್ನು ಯಾರೂ ಹುಡುಕಲು ಯತ್ನಿಸಬಾರದು. ನನಗೆ ಎಲ್ಲಿಯೂ ಜಾಗ ಸಿಗದಿದ್ದರೆ ಬೇರೆ ಲೋಕಕ್ಕೆ ÔæàVÚß}æ¡Þ«æ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಅವರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಮುಂಡರಗಿಯವರು: ಇವರು ಮೂಲತಃ ಮುಂಡರಗಿ ಪಟ್ಟಣದವರಾಗಿದ್ದು, ಒಬ್ಬ ಪುತ್ರ, ಒಬ್ಬ ಮಗಳಿದ್ದಾಳೆ. ಈ ಮೊದಲು ಮುಂಡರಗಿ ತಾಪಂ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು. ಜುಲೈ 7, 2011ರಿಂದ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ನರಗುಂದ ತಾಪಂ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಅಧಿಕಾರಿಯಿಂದ 2 ದಿನಗಳಿಂದ ರಜೆ ಪತ್ರವೂ ಇಲ್ಲ, ಕಚೇರಿಗೂ ತಿಳಿಸಿಲ್ಲ. ಅಲ್ಲಿನ ಸಿಬ್ಬಂದಿ ಆಕಸ್ಮಿಕವಾಗಿ ಅವರ ಟೇಬಲ್ ಟ್ರೇ ಗಮನಿಸಿದಾಗ ಈ ಪತ್ರ ಸಿಕ್ಕಿದೆ. ನಂತರ ಪತ್ರ ನೋಡಿದ ತಾಪಂ ಹಿರಿಯ ಅಧಿಕಾರಿ ನಂದಕುಮಾರ, ನಾಪತ್ತೆಯಾಗಿರುವ ಅಧಿಕಾರಿ ಪೋಟೋ ಮತ್ತು ಅವರು ಬರೆದ ಪತ್ರವನ್ನು ನರಗುಂದ ಠಾಣೆಗೆ ನೀಡಿದ್ದು, ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement