ದಶಲಕ್ಷಣ ಪರ್ವಾಚರಣೆ, ಸಂಪರ್ಕ ಸಭೆ
ಗದಗ: ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಸೆ. 10 ರಿಂದ 22ರ ವರೆಗೆ ಗದಗ ಜಿಲ್ಲೆಯ ವಿವಿದೆಡೆ ದಶಲಕ್ಷಣ ಪರ್ವಾಚರಣೆ, ಸಮಾಜ ಸಂಪರ್ಕ ಸಭೆ ಕಾರ್ಯಕ್ರಮ ಏರ್ಪಡಿಸಿದೆ.
ಸೆ. 12 ರಂದು ಸಂಜೆ 5 ಗಂಟೆಗೆ ನರಗುಂದದ ಆದಿನಾಥ ಜಿನ ಮಂದಿರದಲ್ಲಿ ಉತ್ತಮ ಆರ್ಜವ ಧರ್ಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಎನ್.ಎಸ್. ರೋಖಡೆ ವಹಿಸುವರು. ಸುಜಾತಾ ರೋಖಡೆ ಉಪನ್ಯಾಸ ನೀಡುವರು. ಸುನಂದಾ ರೋಖಡೆ, ಶೋಭಾ ಪಾಟೀಲ, ಬಿ.ಎಸ್. ನಾವಳ್ಳಿ ಆಗಮಿಸುವರು. ಸೆ. 13 ರಂದು ಸಂಜೆ 4 ಗಂಟೆಗೆ ಬನ್ನಿಕೊಪ್ಪದ ಪಾರ್ಶ್ವನಾಥ ಜಿನ ಮಂದಿರದಲ್ಲಿ ಉತ್ತಮ ಶೌಚ ಧರ್ಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಫಕ್ಕಣ್ಣ ಹಾಂಸಿ ವಹಿಸುವರು. ಉಪನ್ಯಾಸಕರಾಗಿ ಶಿಕ್ಷಕ ಪಿ.ಎನ್. ಅಲ್ಲಯ್ಯನವರ ಆಗಮಿಸುವರು. ಅತಿಥಿಗಳಾಗಿ ಬಿ.ಎನ್. ನಾವಳ್ಳಿ, ಎನ್.ಡಿ. ಪಾಟೀಲ ಆಗಮಿಸುವರು. ಸೆ. 14 ರಂದು ಸಂಜೆ 5 ಗಂಟೆಗೆ ಹರ್ತಿಯ ಬಿ.ಎಸ್. ನಾವಳ್ಳಿ ಕಟ್ಟಡದಲ್ಲಿ ಉತ್ತಮ ಸತ್ಯ ಧರ್ಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಮಹಾದೇವಗೌಡ ಹೊಂಬಣ್ಣವರ ವಹಿಸುವರು. ಉಪನ್ಯಾಸಕರಾಗಿ ಪ್ರೊ. ಬಾಹುಬಲಿ ಜೈನರ ಆಗಮಿಸುವರು. ಅತಿಥಿಗಳಾಗಿ ಎಂ.ಬಿ. ಪಾಟೀಲ, ಎ.ಎನ್. ಬಸ್ತಿ, ಡಾ. ಕೆ.ಡಿ. ಪಾಟೀಲ ಆಗಮಿಸುವರು. ಸೆ. 15 ರಂದು ಮಧ್ಯಾಹ್ನ 2 ಗಂಟೆಗೆ ಮಾದನೂರನ ಪಾರ್ಶ್ವನಾಥ ಜಿನ ಮಂದಿರದಲ್ಲಿ ಉತ್ತಮ ಸಂಯಮ ಧರ್ಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ನೆರವೇರಿಸುವರು. ಅಧ್ಯಕ್ಷತೆಯನ್ನು ಧರ್ಮಗೌಡ ಮಾಲಿಪಾಟೀಲ ವಹಿಸುವರು. ಅತಿಥಿಗಳಾಗಿ ಶೀತಲ ದೇಸಾಯಿ, ಕೆ.ಎನ್. ಮಲ್ಲಾಡದ, ಪಿ.ಎನ್. ಅಲ್ಲಯ್ಯನವರ, ಪಿ.ಎ. ಕುಲಕರ್ಣಿ ಆಗಮಿಸುವರು. ಸೆ. 16 ರಂದು ಸಂಜೆ 4 ಗಂಟೆಗೆ ಲಕ್ಷ್ಮೇಶ್ವರದ ಶಂಖ ಬಸದಿಯಲ್ಲಿ ಉತ್ತಮ ತಪ ಧರ್ಮ ಕಾರ್ಯಕ್ರಮ ಜರುಗಲಿದ್ದು, ಉಪನ್ಯಾಸಕರಾಗಿ ಶೃದ್ಧಾ ಪಾಟೀಲ ಆಗಮಿಸುವರು. ಇದೇ ಸಂದರ್ಭದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬಸವರಾಜ ಓದಣ್ಣವರ, ಡಾ. ಎಸ್.ವಿ. ವೆಂಕಟೇಶಯ್ಯ, ಅನಂತಗೌಡ ಪಾಟೀಲರಿಗೆ ಸನ್ಮಾನ ನಡೆಯಲಿದೆ. ಸೆ. 17 ರಂದು ಸಂಜೆ 4 ಗಂಟೆಗೆ ಶಿರಗುಪ್ಪಿಯ ಪಾರ್ಶ್ವನಾಥ ಜಿನ ಮಂದಿರದಲ್ಲಿ ಉತ್ತಮ ತ್ಯಾಗ ಧರ್ಮ ಕಾರ್ಯಕ್ರಮವಿದೆ. ಅಧ್ಯಕ್ಷತೆಯನ್ನು ದೇವೇಂದ್ರಪ್ಪ ಅಂಗಡಿ ವಹಿಸುವರು. ಶಿಕ್ಷಕ ಪದ್ಮರಾಜ ಕುಲಕರ್ಣಿ ಉಪನ್ಯಾಸ ನೀಡುವರು. ಸೆ. 18 ರಂದು ಸಂಜೆ 5 ಗಂಟೆಗೆ ಗದುಗಿನ ಪಿ.ಎ. ಕುಲಕರ್ಣಿ ಅವರ ಕಟ್ಟಡದಲ್ಲಿ ಉತ್ತಮ ಅಕಿಂಚನ್ಯ ಧರ್ಮ ಕಾರ್ಯಕ್ರಮವಿದೆ. ಅಧ್ಯಕ್ಷತೆಯನ್ನು ಡಾ. ಬಿ.ಎಫ್. ದಂಡಿನ ವಹಿಸುವರು. ಉಪನ್ಯಾಸಕರಾಗಿ ಶಿಕ್ಷಕಿ ಕವಿತಾ ದಂಡಿನ ಆಗಮಿಸುವರು. ಸೆ. 19 ರಂದು ಸಂಜೆ 5 ಗಂಟೆಗೆ ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢ ಶಾಲೆಯಲ್ಲಿ ಉತ್ತಮ ಬ್ರಹ್ಮಚರ್ಯ ಧರ್ಮ ಕಾರ್ಯಕ್ರಮವಿದೆ. ಅಧ್ಯಕ್ಷತೆಯನ್ನು ಶೋಭಕ್ಕ ಪಿಡ್ಡಿ ವಹಿಸುವರು. ಉಪನ್ಯಾಸಕರಾಗಿ ರಶ್ಮಿ ದೇಸಾಯಿ ಆಗಮಿಸುವರು. ಅತಿಥಿಗಳಾಗಿ ಸರೋಜಾ ನಾವಳ್ಳಿ, ಶೋಭಾ ಇಂಚಲ, ಅನಂತಮತಿ ಬಸ್ತಿ, ಪದ್ಮಾವತಿ ತುಕೋಳ, ಪದ್ಮಾವತಿ ಕುಲಕರ್ಣಿ, ಅನಂತಮತಿ ಪಾಟೀಲ, ಪರಿಮಳಾ ಕುಲಕರ್ಣಿ ಆಗಮಿಸುವರು. ಸೆ. 22 ರಂದು ಬೆಳಗ್ಗೆ 11 ಗಂಟೆಗೆ ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢ ಶಾಲೆಯಲ್ಲಿ ಸಾಮೂಹಿಕ ಕ್ಷಮಾವಳಿ ಮತ್ತು ಸಮಾರೋಪ ಸಮಾರಂಭವಿದೆ. ಉದ್ಘಾಟನೆಯನ್ನು ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ನೆರವೇರಿಸುವರು. ಅಧ್ಯಕ್ಷತೆಯನ್ನು ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಅಧ್ಯಕ್ಷ ಬಿ.ಎಸ್. ನಾವಳ್ಳಿ ವಹಿಸುವರು. ಉಪನ್ಯಾಸಕರಾಗಿ ಡಾ. ಜಿನದತ್ತ ಹಡಗಲಿ ನೆರವೇರಿಸುವರು. ಅತಿಥಿಗಳಾಗಿ ಡಾ. ವಿ.ಎಚ್. ಹೊಂಬಣ್ಣವರ, ಪಿ.ಜಿ. ನಾವಳ್ಳಿ, ಆರ್.ಎನ್.ದೇಶಪಾಂಡೆ, ಸಿ.ಕೆ. ಮುತ್ತಿನ, ರವೀಂದ್ರ ಮುನವಳ್ಳಿ ಆಗಮಿಸುವರು. ನಗರಸಭೆ ಸದಸ್ಯ ಪ್ರವೀಣಕುಮಾರ ಬನಸಾಲಿ, ಗದಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪದ್ಮರಾಜ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು ಎಂದು ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮುತ್ತಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--