ಶಿಕ್ಷಕರು ನಿವೃತ್ತರಲ್ಲ, ಯುವಕರಿಗೆ ಮಾರ್ಗದರ್ಶಕರು
ಕನ್ನಡಪ್ರಭ ವಾರ್ತೆ, ನರೇಗಲ್ಲ, ಸೆ. 11
ಶಿಕ್ಷಕರು ನಿವೃತ್ತರಲ್ಲ ನಮ್ಮಂತಹ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ. ಅವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಜಗದೀಶ ಕರಡಿ ಹೇಳಿದರು.
ಅವರು ಈಚೆಗೆ ಸಮೀಪದ ನಿಡಗುಂದಿ ಗ್ರಾಪಂ ಸಭಾಂಗಣದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತ್ಯುತ್ಸವ, ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಈ ದೇಶ ಕಂಡ ಅಪರೂಪದ ಶಿಕ್ಷಕ, ತತ್ವಜ್ಞಾನಿ, ಶಿಕ್ಷಣತಜ್ಞ, ಉಪರಾಷ್ಟ್ರಪತಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿ ಮಾದರಿ ವ್ಯಕ್ತಿತ್ವ ರೂಢಿಸಿಕೊಂಡಿದ್ದರು. ನಮ್ಮೆಲ್ಲ ಶಿಕ್ಷಕ ಬಳಗಕ್ಕೆ, ನಾಗರಿಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಉಪನ್ಯಾಸಕರಾಗಿದ್ದ ನಿಡಗುಂದಿಯ ಸ.ಪ.ಪೂ. ಕಾಲೇಜಿನ ಎಸ್.ಎಸ್. ಹಿರೇಮಠ ಮಾತನಾಡಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ನಿಡಗುಂದಿಯ ಭೀಮಾಂಬಿಕಾದೇವಿ ಮಠದ ಷಣ್ಮುಖಪ್ಪಜ್ಜ ಧರ್ಮರ ಆಶೀರ್ವಚನ ನೀಡಿ, ಶಿಕ್ಷಕರು ಉತ್ತಮ ಸಮಾಜದ ಶಿಲ್ಪಗಳಾಗಿದ್ದಾರೆ. ಶಿಕ್ಷಕರು ಇಂದು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯರೆಯುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.
ಉಪನ್ಯಾಸಕ ಡಾ. ವೈ.ಆರ್. ಬೇಲೇರಿ, ನಿವೃತ್ತ ಶಿಕ್ಷಕ ಪಿ.ಕೆ. ಕರಡಿ, ವಿ.ಆರ್. ಗೆದಗೇರಿ, ಎಂ.ಕೆ. ಸರ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಶಿಕ್ಷಕ ಹಾಗೂ ಉಪನ್ಯಾಸಕರನ್ನು ಜಿ.ಡಿ. ಹುಯಿಲಗೋಳ, ವಿ.ವಿ. ಲಗುಬಗಿ, ಬಿ.ಎಸ್. ಕೊಪ್ಪದ, ಎಸ್.ಸಿ. ಮೇಟಿ, ಎಂ.ಎಂ. ಸರ್ವಿ, ಜಿ.ಎಸ್. ಧರಣಾ, ಶಿಕ್ಷಕಿ ಐ.ಆರ್. ಮಲ್ಲಾಪುರ, ವಿ.ಬಿ. ಹೊಟ್ಟಿನ ಮುಂತಾದವರಿಗೆ ಸನ್ಮಾನಿಸಲಾಯಿತು. ಉಪನ್ಯಾಸಕ ಶರಣಪ್ಪ ಅರಮನಿ ಸ್ವಾಗತಿಸಿದರು. ಸಿದ್ದಯ್ಯ ಗುಡದುರಕಲ್ಲ ನಿರೂಪಿಸಿದರು. ಅಶೋಕ ಅಮರಗೋಳ ವಂದಿಸಿದರು.