ಹಜ್ಯಾತ್ರೆಯಿಂದಪುಣ್ಯಪ್ರಾಪ್ತಿ: ಎಚ್ಕೆ
ಗದಗ: ಮುಸ್ಲಿಂ ಸಮುದಾಯದವರು ಕೈಗೊಳ್ಳುವ ಪವಿತ್ರ ಹಜ್ ಯಾತ್ರೆ ಧಾರ್ಮಿಕ ಜಾಗೃತಿಯನ್ನು ಹೆಚ್ಚಿಸಿ, ಸನ್ಮಾರ್ಗವನ್ನು ನೀಡುವ ಪುಣ್ಯಪ್ರಾಪ್ತಿಯ ಯಾತ್ರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಅವರು ಈಚೆಗೆ ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ರಾಜ್ಯ ಹಜ್ ಸಮಿತಿ ಮತ್ತು ಭಾರತೀಯ ಹಜ್ ತರಬೇತಿ ವೇದಿಕೆ ಹಜ್ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಏರ್ಪಡಿಸಿದ್ದ 2 ದಿನದ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಹಜ್ ಯಾತ್ರಿಕರಿಗೆ ಮಾರ್ಗದರ್ಶನ ನೀಡುವ ಸಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಹಜ್ ಯಾತ್ರೆ ಕೈಗೊಳ್ಳುವ ಮುಸ್ಲಿಂ ಬಾಂಧವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಈ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ನಾನಾ ಜಿಲ್ಲೆಗಳಿಂದ ಆಗಮಿಸಿರುವ ಹಜ್ ಯಾತ್ರಿಗಳು ಇದರ ಸದುಪಯೋಗ ಪಡೆದುಕೊಂಡಿರುವುದು ಸಂತಸ ತಂದಿದೆ ಎಂದರು. ಭಾರತೀಯ ಹಜ್ ತರಬೇತಿ ವೇದಿಕೆಯ ಮುಖ್ಯ ತರಬೇತುದಾರ ಸೈಯದ್ ಎಜಾಝದ್ ಅಹ್ಮದ್ ಅವರು ಹಜ್ ಯಾತ್ರೆಯ ಮುಖ್ಯಾಂಶಗಳ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಐ.ಜಿ. ಸನದಿ ಮಾತನಾಡಿ, ಧಾರವಾಡ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಹಜ್ ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಇಂತಹ ಶಿಬಿರದ ಮೂಲಕ ಯಾತ್ರಿಕರಿಗೆ ಹೆಚ್ಚು ಉಪಯುಕ್ತ ಮಾಹಿತಿ ರವಾನೆಯಾದಂತಾಗಿದೆ. ಹಜ್ ಯಾತ್ರಿಕರ ಪ್ರಯಾಣ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಭಾರತೀಯ ಹಜ್ ತರಬೇತಿ ವೇದಿಕೆಯ ಮುಖ್ಯ ತರಬೇತುದಾರ ಸೈಯದ ಎಜಾಝದ್ ಅಹ್ಮದ್ ಹಾಗೂ ಮೌಲಾನಾ ಮೊಹ್ಮದ ಲುಥ್ಫುಲ್ಲಾ ಮುಝಹರ ರಶ್ದಿ ಅವರು ಯಾತ್ರಿಕರಿಗೆ ಮಾಹಿತಿ ನೀಡಿದರು.
ಪ್ರಾಚಾರ್ಯ ಎ.ಎಂ. ಮುಲ್ಲಾ, ಹಲವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಎ.ಎಂ. ಮುಲ್ಲಾ, ಎಂ.ಎಂ. ಶೇಖ, ಆರ್.ಎಲ್. ಬಾಗಲಕೋಟೆ, ಇಕ್ಬಾಲ್ ಹಣಗಿ, ಸೌದಾಗರ, ಇಸ್ಮಾಯಿಲ್ ಬಿಜಾಪುರ, ಅಲ್ತಾಫ ರಾಣೆಬೆನ್ನೂರ, ಮುಸ್ತಾಕ ಮನಿಯಾರ, ರಿಯಾಜಅಹ್ಮದ, ಕೆ.ಐ. ಶೇಖ, ಎ.ಎಸ್. ಖವಾಸ, ಎಂ.ಎನ್. ಮಕಾನದಾರ, ಎಂ.ಎ. ಹಣಗಿ, ಕರೀಮಸಾಬ ನವಲಗುಂದ, ಜೀವನಸಾಬ ಮಂಗಳೂರ, ಎಲ್.ಎಂ. ಅಕ್ಕಿ, ಎಂ.ಎನ್.ದಾಯಮ್ಮನವರ, ಎ.ಜಿ. ಯರಗುಡಿ, ಜಿ.ಎಂ. ದಂಡಿನ ಮುಂತಾದವರು ಉಪಸ್ಥಿತರಿದ್ದರು.
ಮೌಲಾನಾ ಹಾಫೀಜ್ ಮೊಹ್ಮದ ಹುಸೇನ ಅವರು ಕುರಾಣ ಪಠಿಸಿದರು. ರಿಜ್ವಾನಾ ಪಾಲಾ ಪ್ರಾರ್ಥಿಸಿದರು. ಸರಫರಾಜ ಉಮಚಗಿ ಸ್ವಾಗತಿಸಿದರು. ಖದೀರಅಹ್ಮದ ಬಾಳೇಕುಂದ್ರಿ ನಿರೂಪಿಸಿ, ವಂದಿಸಿದರು.