ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಜಿಲ್ಲಾ ಕಾಂಗ್ರೆಸ್ ಸಭೆ

Lingaraj Badiger
Updated On : 13 Sept 2013, 11:41 am

ಗದಗ: ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಸಭೆ ನಗರದ ಕಾಟನ್‌ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೆ. 13ರ ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ಈ ಸಭೆಯಲ್ಲಿ ಮುಂಬರುವ ಲೋಕಸಭೆಯ ಚುನಾವಣೆಯ ಕುರಿತು ಚರ್ಚಿಸಲಾಗುತ್ತಿದ್ದು, ಕೆಪಿಸಿಸಿ ವೀಕ್ಷಕ ವಿಪ ಸದಸ್ಯ ಟಿ.ಜಾನ್, ವಿಪದ ಮಾಜಿ ಸದಸ್ಯ ಎಚ್. ಹನುಮಂತಯ್ಯ, ಮಾಜಿ ಶಾಸಕ ಚಂದ್ರಶೇಖರ, ಮೈಸೂರು ವಸ್ತು ಪ್ರಾಧಿಕಾರದ ಅಧ್ಯಕ್ಷ ರಘು ಆಗಮಿಸಲಿದ್ದು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಸುರೇಶ, ವಿಪ ಸದಸ್ಯ ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಮಾಜಿ ಸಂಸದ ಐ.ಜಿ. ಸನದಿ, ನೆಹರೂ ಯುವ ಕೇಂದ್ರದ ಅಧ್ಯಕ್ಷ ಸಲೀಂ ಅಹ್ಮದ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಉಪಸ್ಥಿತರಿರುವರು. ಈ ಸಭೆಗೆ ಕಾಂಗ್ರೆಸ್ ಪಕ್ಷದ ಮಾಜಿ ಹಾಗೂ ಹಾಲಿ ಸಂಸದರು, ಪಕ್ಷದ ಜಿಲ್ಲಾ ಪಧಾದಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ ಪಕ್ಷದ ಅಧ್ಯಕ್ಷರು ಹಾಗೂ ಸದಸ್ಯರು, ನಗರಸಭೆ, ಪಪಂ, ಪುರಸಭೆ ಅಧ್ಯಕ್ಷರು, ಸದಸ್ಯರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ರಾಜೀವಗಾಂಧಿ ಪಂಚಾಯತ್ ಸಂಘಟನೆ ಅಧ್ಯಕ್ಷರು, ಸದಸ್ಯರು, ಪಕ್ಷದ ಅಭಿಮಾನಿಗಳು ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ತಿಳಿಸಿದ್ದಾರೆ.
ಇಂದಿನಿಂದ ಲಿಂ. ಪುಟ್ಟರಾಜ ಶ್ರೀಗಳ ಸ್ಮರಣೋತ್ಸವ
ಗದಗ: ಬೆಟಗೇರಿಯ ಕಿಲ್ಲಾ ಓಣಿಯಲ್ಲಿರುವ ಮೈಲಾರಲಿಂಗೇಶ್ವರ ಭಜನಾ ಮಂಡಳಿ ಹಾಗೂ ಕಲಾಮೇಳದ ಆಶ್ರಯದಲ್ಲಿ ಸೆ. 13 ಹಾಗೂ 14ರಂದು ಲಿಂ. ಪಂಡಿತ ಪುಟ್ಟರಾಜ ಶ್ರೀಗಳ ತೃತೀಯ ಪುಣ್ಯ ಸ್ಮರಣೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸೆ. 13ರಂದು ಮೈಲಾರಲಿಂಗೇಶ್ವರ ದೇವಸ್ತಾನದಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. 14ರ ಬೆಳಗ್ಗೆ 5ಕ್ಕೆ ಭಜನೆಯೊಂದಿಗೆ ವೀರೇಶ್ವರ ಪುಣ್ಯಾಶ್ರಮಕ್ಕೆ ತೆರಳಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಗುವುದು. ನಂತರ ಬೆಳಗ್ಗೆ 11ಕ್ಕೆ ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಮಹೇಶ ಕರಿಬಿಷ್ಠಿ, ಈಶ್ವರಗೌಡ ಪಾಟೀಲ ತಿಳಿಸಿದ್ದಾರೆ.
16ರಂದು ಲೋಕಾ ನ್ಯಾಯಮೂರ್ತಿ ಗದಗಕ್ಕೆ
ಗದಗ: ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ್‌ರಾವ್ ಸೆ. 16 ರಂದು ಗದುಗಿಗೆ ಆಗಮಿಸಲಿದ್ದಾರೆ. ಅಂದು ನಗರದ ಎಪಿಎಂಸಿ ಆವರಣದಲ್ಲಿರುವ ವಿವೇಕಾನಂದ ಸಭಾಭವನದಲ್ಲಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕಕ್ಷ ಕೆ. ಪರಶುರಾಮ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement