ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಠ್ಯದಷ್ಟೆ ಪಠ್ಯೇತರ ಚಟುವಟಿಕೆ ಮುಖ್ಯ: ಸಂಕನೂರ

Lingaraj Badiger
Updated On : 13 Sept 2013, 11:41 am

ಕನ್ನಡಪ್ರಭ ವಾರ್ತೆ, ಗದಗ, ಸೆ. 12
ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ವಿಜ್ಞಾನ ಪರಿಷತ್‌ನ ಅಧ್ಯಕ್ಷ ಎಸ್.ವಿ. ಸಂಕನೂರ ಹೇಳಿದರು.
ಅವರು ಈಚೆಗೆ ನಗರದ ಆದರ್ಶ ಶಿಕ್ಷಣ ಸಮಿತಿಯಿ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನೆ ಹಾಗೂ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸತತ ಕ್ರಿಯಾಶೀಲರಾಗಿರಲು ಕ್ರೀಡೆ ಅತ್ಯವಶ್ಯ. ಜೀವನದಲ್ಲಿ ಒಮ್ಮೆ ಪಡೆದ ಯಶಸ್ಸು ಮುಂದುವರೆಯುತ್ತಲೇ ಇರಬೇಕು. ಅದು ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆ ಹೊಂದಿ ಸನ್ಮಾರ್ಗಕ್ಕೆ ಪಾತ್ರವಾಗಬೇಕು ಎಂದರು.
ಸಂಸ್ಥೆಯ ಸಂಸ್ಥಾಪಕ ವಿ.ಆರ್. ಗೋವಿಂದಗೌಡ್ರ ಕಾರ್ಯಕ್ರಮ ಉದ್ಘಾಟಿಸಿದರು. ವಿ.ಆರ್. ಮಾಳೆಕೊಪ್ಪಮಠ, ಎ.ಡಿ. ಗೋಡಖಿಂಡಿ, ಬಿ.ವಿ. ಇನಾಮದಾರ, ಎಂ.ಐ. ಯಾದವಾಡ, ಎಂ.ಎಂ. ಗುಡ್ಡದ, ಎಸ್.ಎ. ಮಾನ್ವಿ, ಜಿ.ಸಿ. ಹೊನ್ನಳ್ಳಿ, ಬಿ.ಎ. ಹಿರೇಮಠ, ಪಪೂ ಪ್ರಾ. ವಿ.ಕೆ. ಸೊರಟೂರ ಮುಂತಾದವರು ಇದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ ಸ್ವಾಗತಿಸಿದರು. ಎಸ್.ಬಿ. ಜಾಧವ್      ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement