ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪುಟ್ಟರಾಜರ ಜಯಂತಿ ಆಚರಣೆಗೆ ಸರ್ಕಾರದ ನಿರ್ಲಕ್ಷ್ಯ

Lingaraj Badiger
Updated On : 13 Sept 2013, 11:35 am

ಕನ್ನಡಪ್ರಭ ವಾರ್ತೆ, ಗದಗ, ಸೆ. 12
ಲಿಂ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಜೀವನಾದರ್ಶಗಳನ್ನು, ಅವರ ಬದುಕನ್ನು ಸದಾಕಾಲ ಸ್ಮರಿಸುವಂತಾಗಬೇಕು. ಸರ್ಕಾರಿ ಮಟ್ಟದಲ್ಲಿ ಪುಟ್ಟರಾಜರನ್ನು ಸ್ಮರಿಸುವ ಜಯಂತಿ ಆಚರಣೆಗೆ ಸರ್ಕಾರ ಹಿಂದೇಟು ಹಾಕುತ್ತಿರುವುದು ಖಂಡನಾರ್ಹವಾಗಿದೆ ಎಂದು ಗವಿಸಿದ್ಧಯ್ಯ ಹಳ್ಳಿಕೇರಿಮಠ ಹೇಳಿದರು.  ಅವರು ಈಚೆಗೆ ತಾಲೂಕಿನ ಹೊಂಬಳ ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಇತಿಹಾಸ ಪುನರುತ್ಥಾನ ಅಕಾಡೆಮಿ ಹಾಗೂ ಜನಧ್ವನಿ ಭ್ರಷ್ಟಾಚಾರ ನಿರ್ಮಾಲನಾ ಸಂಸ್ಥೆ, ಕೂಗು ಸಂಘಟನೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪುಟ್ಟರಾಜರ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಮಾತನಾಡಿದರು. ಪಂ. ಪುಟ್ಟರಾಜ ಸಾಧನೆಯನ್ನು ವರ್ಣಿಸಲು ಅಸಾಧ್ಯ. ಸರ್ಕಾರ ಕೂಡಲೇ ಎಚ್ಚೆತ್ತು ಪುಟ್ಟರಾಜರ ಜಯಂತಿ ಆಚರಿಸಲು ಮುಂದಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬಸವರಾಜ ಹಳ್ಳಿಕೇರಿ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಶಂಕರಲಿಂಗೇಶ್ವರ ದೇವಸ್ಥಾನದ ಭಕ್ತ ಮಂಡಳಿಯವರು ಪಾಲ್ಗೊಂಡಿದ್ದರು. ಅಶ್ವಿನಿ ಪೂಜಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದೇವರಾಜ ಕುರಿ ಸ್ವಾಗತಿಸಿದರು. ಸುಶ್ಮೀತಾ ಬದಾಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement