ಲಕ್ಷ್ಮೇಶ್ವರದಲ್ಲಿ ಮೃತ ಬಾಲಕನ ಮನೆಗೆ ರಾಮಣ್ಣ ಲಮಾಣಿ ಭೇಟಿ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಸಂತೋಷಗೌಡ ಪಾಟೀಲ ಎನ್ನುವ ಬಾಲಕ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆ ತಿಳಿದ ಮಾಜಿ ಶಾಸಕ ರಾಮಣ್ಣ ಲಮಾಣಿ ಮೃತ ಬಾಲಕನ ಮನೆಗೆ ಗುರುವಾರ ಭೇಟಿ ನೀಡಿ ತಂದೆ-ತಾಯಿಗೆ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಮೃತ ಬಾಲಕನ ಮನೆಗೆ ಭೇಟಿ ನೀಡಿದ ಡಿಡಿಪಿಐ ರಾಜೀವ ನಾಯಕ್ ಸಾಂತ್ವನ ಹೇಳಿ, ಸರ್ಕಾರದಿಂದ ಮೃತ ಬಾಲಕನ ಕುಟುಂಬಕ್ಕೆ ಸಿಗಬೇಕಾದ ಎಲ್ಲ ನೆರವನ್ನು ಶೀಘ್ರ ಒದಗಿಸಿಕೊಡುವುದಾಗಿ ತಿಳಿಸಿದರು.
ಬಿಇಓ ಆರ್.ಎಸ್. ಬುರುಡಿ, ಬಿಆರ್‌ಸಿಯ ಸಮನ್ವಯಾಧಿಕಾರಿ ಜಯಶ್ರೀ ಗುಡಿ, ನಾಗರಾಜ ಚಿಂಚಲಿ, ಸಿದ್ಧನಗೌಡ ಬೊಳ್ಳಳ್ಳಿ, ಶಿಗ್ಲಿಮಠ ಸೇರಿದಂತೆ ಅನೇಕರು ಹಾಜರಿದ್ದರು.