ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹುಲ್ಲೂರ ಆಯ್ಕೆ

Lingaraj Badiger
Updated On : 13 Sept 2013, 11:35 am

ಗದಗ: ಈಚೆಗೆ ನಡೆದ ಜಿಲ್ಲಾ ಬಿಜೆಪಿ ಸಭೆಯಲ್ಲಿ ಗದಗ ಜಿಲ್ಲಾ ಸ್ಲಂ ಮೋರ್ಚಾದ ಅಧ್ಯಕ್ಷರನ್ನಾಗಿ ಬೆಟಗೇರಿ ಭಾಗದ ಅರವಿಂದ ಹುಲ್ಲೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾಜಿ ಸಚಿವ ಕಳಕಪ್ಪ ಬಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಗದಲ್ಲಿ ಸಾಧನೆ
ನರಗುಂದ:  ತಾಲೂಕಿನ ಶಿರೋಳ ಗ್ರಾಮದ ಹಂಪಸಾಗರ ಪರ್ವತ ಮರಿದೇವರ ಸ್ಮಾರಕ ಯೋಗ ವ್ಯಾಯಾಮ ಹಾಗೂ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ ಮಹಾಂತೇಶ ಮಾದರ ಹಾಗೂ ಈರಣ್ಣ ಹೂದ್ಲೂರ ಅವರು ಈಚೆಗೆ ಮೈಸೂರಿನ ಕಾಲಮಂದಿರದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಮೇಳದಲ್ಲಿ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳನ್ನು ಶಿರೋಳ ತೋಂಟದಾರ್ಯ ಮಠದ ಗುರುಬಸವ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಯೋಗ ಪಾಠ ಶಾಲೆಯ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ತರಬೇತದಾರ ಶರಣಯ್ಯ ಹಿರೇಮಠ, ಈರಣ್ಣ ಕವಡಿಮಟ್ಟಿ, ವಿನಾಯಕ ಶಾಲದಾರ, ಎಂ.ಎಸ್. ಹಳ್ಳೂರ, ಶರಣಪ್ಪ ಕೊಣ್ಣೂರ, ಮಹಾಂತೇಶ ಬಾಳಿಕಾಯಿ ಮುಂತಾದವರು ಅಭಿನಂದಿಸಿದ್ದಾರೆ.

ಸ್ತ್ರೀಯರಿಗೆ ಪವಿತ್ರ ಸ್ಥಾನ
ಗದಗ: ಹಿಂದಿನ ಕಾಲದಿಂದ ಇಂದಿನವರೆಗೂ ನಮ್ಮ ಧರ್ಮದಲ್ಲಿ ಸ್ತ್ರೀಯರಿಗೆ ಪವಿತ್ರವಾದ ಸ್ಥಾನವಿದೆ ಎಂದು ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಹೇಳಿದರು. ಅವರು ಈಚೆಗೆ ಸ್ಥಳೀಯ ಗಂಗಾಪುರ ಪೇಟೆಯ ಬೇವಿನ ಮರದಮ್ಮ ದೇವಿಯ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಂಗೂಬಾಯಿ ಕಲಬುರ್ಗಿ, ರೇಣವ್ವ ಕವಳಿಕಾಯಿ, ಅಂಬುಬಾಯಿ ಕಬಾಡಿ, ಲಕ್ಷ್ಮಿಬಾಯಿ ಪವಾರ ಹಲವಾರು ಮಹಿಳೆಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement