ಅಲ್ಲಮಪ್ರಭು ಅನುಭವ ಜಂಗಮ: ತೋಂಟದ ಶ್ರೀ
ಗದಗ: ಬಸವಣ್ಣ ಸಂಸ್ಥಾಪಿಸಿದ ಆನುಭವ ಮಂಟಪ ವಿಶ್ವದ ಮೊದಲ ಜನತಾ ಪಾರ್ಲಿಮೆಂಟ ಆಗಿತ್ತು. ಇನ್ನು ಬಸವಣ್ಣ ಅನುಭವ ಮಂಟಪದ ಪೀಠಾಧಿಪತಿಯನ್ನಾಗಿಸಿದ ಅಲ್ಲಮಪ್ರಭು ಜಾತಿಯಿಂದ ಜಂಗಮನಾಗಿದ್ದಿಲ್ಲ, ಅನುಭವ ಜಂಗಮನಾಗಿದ್ದ. ಇದು ಹುಟ್ಟಿನಿಂದ ಬರುವ ಜಾತಿಯಲ್ಲ, ತದನಂತರ ಮಾನವ ಸಾಧಿಸಬಹುದಾದ ಅನುಭವ-ಅನುಭಾವ-ಯೋಗ್ಯತೆ ಮುಖ್ಯವೆಂಬುದನ್ನು ನಿದರ್ಶಿಸಿದೆ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು. ಅವರು ಈಚೆಗೆ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2136ನೇ ಶಿವಾನುಭವದ ಸಾನ್ನಿಧ್ಯವಹಿಸಿ ಹಾಗೂ ನಗರದ ಡಿ.ಸಿ. ಪಾವಟೆ ಬಿಇಡಿ ಕಾಲೇಜಿನ ಪ್ರಾಚಾರ್ಯ ಬಿ. ಮಲ್ಲಿಕಾರ್ಜುನ ಅವರು ದಿ. ಬಳ್ಳಾರಿ ಚಿತ್ರಕಿ ಕೊಟ್ರಪ್ಪ ಅವರ ಸ್ಮರಣಾರ್ಥ ಕೊಡಮಾಡುವ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿದ್ಯಾದಾನ ಸಮಿತಿ ಬಾಲಕರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎನ್.ಎಸ್. ಬಟ್ಟೂರ ದಂಪತಿ ಹಾಗೂ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ಪಡೆದ ಬದಾಮಿಯ ಸುಧಾರಾಣಿ ಅಮಾತೆಪ್ಪನವರ ಅವರಿಗೆ ಪ್ರಶಸ್ತಿ-ಸನ್ಮಾನದ ಗೌರವ ನೀಡಿ ಆಶೀರ್ವಚನ ನೀಡಿದರು. ಅಲ್ಲಮಪ್ರಭು ಮೂಲತಃ ಮದ್ದಳೆ ಬಾರಿಸುವ ಕಾಯಕದವನು. ಆದರೆ, ಜ್ಞಾನಸಾಧನೆ, ಯೋಗ್ಯತೆ ದೃಷ್ಟಿಯಿಂದ ಅಲ್ಲಮ ಜಾತಿ ಮೀರಿದ ಜಂಗಮನಾಗಿದ್ದ ಆತನಿಗೆ ಎಲ್ಲರೂ ತಲೆ ಬಾಗಿದರು. ಆಗಲೆ ಸಮಾನತೆಯ ಸಮಾಜ ನಿರ್ಮಾಣವಾಗಿತ್ತು. ಶಾಲೆಗಳೇ ಇರದ ಅಂದಿನ ಕಾಲದಲ್ಲಿ ಅನುಭವ ಮಂಟಪ ಒಂದು ಮುಕ್ತ ವಿಶ್ವವಿದ್ಯಾಲಯದಂತೆ ಕೆಲಸ ಮಾಡಿತು ಎಂದರು. ಡಿ.ಸಿ. ಪಾವಟೆ ಬಿಇಡಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ, ನಿವೃತ್ತ ಶಿಕ್ಷಕ ಎಂ.ಎ. ಹಂಚಿನಾಳ ಅವರು 1 ತಿಂಗಳ ಪರ್ಯಂತ ನಡೆಸಿಕೊಂಡು ಬಂದ ಬಸವ ಮಹಾದರ್ಶನ ಪ್ರವಚನ ಮಂಗಲ ನಡೆಯಿತು. ಪ್ರಾ. ಬಿ. ಮಲ್ಲಿಕಾರ್ಜುನ, ಸೋಮಶೇಖರ ಆನೂರಶೆಟ್ರ, ಶಿವಾನುಭವ ಸಮಿತಿ ಚೇರ್‌ಮನ್ ಎಸ್.ಎನ್. ಆದಿ ಸ್ವಾಗತಿಸಿದರು. ಪ್ರಕಾಶ ಕರಿಸೋಮನಗೌಡ್ರ, ಮೃತ್ಯುಂಜಯ ಸಂಕೇಶ್ವರ, ವೀರಣ್ಣ ಹೊನಗಣ್ಣವರ ಮುಂತಾದವರು ಇದ್ದರು