ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಡಿ.ಆರ್. ಪಾಟೀಲಗೆ ಟಿಕೆಟ್ ನೀಡಲು ಆಗ್ರಹ

Vishwanath S
Updated On : 14 Sept 2013, 11:55 am

ಗದಗ:  ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್‌ನ್ನು ಪಕ್ಷದ ಹಿರಿಯ ರಾಜಕಾರಣಿ ಡಿ.ಆರ್. ಪಾಟೀಲರಿಗೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಶುಕ್ರವಾರ ವೀಕ್ಷಕ ಟಿ. ಜಾನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ತತ್ವ ಸಿದ್ಧಾಂತಗಳಲ್ಲಿ ಅತ್ಯಂತ ನಂಬಿಗೆ ಇಟ್ಟು ಕಳೆದ ನಾಲ್ಕು ದಶಕಗಳಿಂದ ಜನ ಸೇವೆಯಲ್ಲಿ ತೊಡಗಿಕೊಂಡು ಅವಿಭಜಿತ ಧಾರವಾಡ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಕ್ರೀಯ ರಾಜಕಾರಣ ಪ್ರವೇಶಿಸಿದ ಡಿ.ಆರ್. ಪಾಟೀಲ ನಂತರ 4 ಬಾರಿ ಗದಗ ಶಾಸಕರಾಗಿ ಆಯ್ಕೆಯಾಗಿ ಗ್ರಾಮೀಣ ಬಡ ಜನರ ನೋವು, ನಲಿವುಗಳಿಗೆ ಸ್ಪಂದಿಸಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗದಗ ಬೆಟಗೇರಿ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಗುರುಣ್ಣ ಬಳಗಾನೂರ, ಫಕ್ಕೀರಪ್ಪ ಅಗಸಿಮನಿ, ಪ್ರಭು ಹುಡೇದ, ಉಮರ್‌ಫಾರೂಕ ಹುಬ್ಬಳ್ಳಿ, ರಫೀಕ ಅಬ್ಬಿಗೇರಿ, ಸರ್ಪರಾಜ ಬಬರ್ಚಿ, ಅಶೋಕ ಮಂದಾಲಿ, ಈಶಣ್ಣ ಹುಣಶೀಕಟ್ಟಿ, ವಜೀದ ಬಬರ್ಚಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement