ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರತಿಯೊಬ್ಬರಲ್ಲಿ ಕ್ರೀಡಾ ಮನೋಭಾವವಿರಲಿ: ಪುರುಷೋತ್ತಮ

Vishwanath S
Updated On : 14 Sept 2013, 11:55 am

ಗದಗ:  ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ತಾಳಿದಲ್ಲಿ ಕ್ರೀಡಾಕೂಟಗಳು ಯಶಸ್ವಿಯಾಗುತ್ತವೆ ಎಂದು ಗದಗ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ ಅಭಿಪ್ರಾಯಪಟ್ಟರು.
ಈಚೆಗೆ ಅವರು ನಗರದ ಶಿವಾನಂದ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ 2013-14ನೇ ಸಾಲಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿದ್ದ ಗದಗ ಶಹರ ಪೊಲೀಸ್ ಅಧಿಕಾರಿ ಟಿ. ಮಹಾಂತೇಶ ಮಾತನಾಡಿ, ಯಾವುದೇ ಕ್ರೀಡಾಪಟುವಿರಲಿ ಸೋಲು-ಗೆಲುವನ್ನು ಲೆಕ್ಕಿಸದೇ ಎಲ್ಲರೂ ಕ್ರೀಡಾಮನೋಭಾವದಿಂದ ಪಾಲ್ಗೊಳ್ಳಿ. ಇಂದು ಸೋತರೇ ನಾಳೆಯ ಗೆಲವು ನಿಮ್ಮದೇ ಎಂಬ ಮನೋವೃತ್ತಿ ಬೆಳೆಸಿಕೊಂಡಲ್ಲಿ ಸದಾ ಗೆಲವು ನಿಮ್ಮದಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ವಿ. ಸಂಕನೂರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳತ್ತ ಗಮನ ನೀಡದೇ ಇರುವುದಕ್ಕೆ ನೋವಿನ ಸಂಗತಿ. ನಮ್ಮ ಆರೋಗ್ಯವು ಸದೃಢವಾಗಿರಬೇಕಾದಲ್ಲಿ ಕ್ರೀಡೆಯು ಅತ್ಯವಶ್ಯಕವಾಗಿದೆ. ಕ್ರೀಡಾಪಟುಗಳಿಗೆ ಸರ್ಕಾರ ನೀಡುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವ ಮೂಲಕ ಕ್ರೀಡೆಯಲ್ಲಿ ಪ್ರಗತಿ ಸಾಧಿಸುವಂತೆ ಹಾರೈಸಿದರು.
ಮುರಲೀಧರ ಸಂಕನೂರ ಸ್ವಾಗತಿಸಿ, ನಿರೂಪಿಸಿದರು. ಆರ್.ಎಚ್. ಪಾಟೀಲ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement