ಶಿಕ್ಷಕ ದಿನಾಚರಣೆ, ಗುರುವಂದನೆ
ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಡಾ. ಎಸ್. ರಾಧಾಕೃಷ್ಣನ್ 125ನೇ ಜಯಂತ್ಯುತ್ಸವ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮುದಿಯಪ್ಪ ಕರಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಸ್.ಎಫ್. ಜಾಲಿಹಾಳ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಗುರುಭಕ್ತಿ, ಶಿಸ್ತು, ಸಹನೆಯಿಂದ ವಿದ್ಯೆ ಸಂಪಾದಿಸಿದಾಗ ಮಾತ್ರ ಸಮಾಜದ ಗೌರವಾದರಗಳಿಗೆ ಪಾತ್ರರಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ಎಸ್ಡಿಎಂಸಿ ಅಧ್ಯಕ್ಷ ಭೀಮನಗೌಡ ಡೊಳ್ಳಿನ, ಮುಖ್ಯೋಪಾಧ್ಯಾಯ ವಿ.ಎಸ್. ಕುಷ್ಟಗಿ, ಶಿಕ್ಷಕ ಎಂ.ಎಸ್. ತೋಟದ, ಬಿ.ಎಂ. ಮೆಣಸಿನಕಾಯಿ, ಜಿ.ವಿ. ಗೆದಗೇರಿ, ಎನ್.ಬಿ. ಕೋಣನವರ, ಎಚ್.ಐ. ಇಟಗಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಲ್ಲಮ್ಮ ಅಬ್ಬಿಗೇರಿ ಸ್ವಾಗತಿಸಿದರು. ಕಮಲೇಶ ಜೂಲಗುಡ್ಡ ನಿರೂಪಿಸಿದರು. ರಾಜೇಶ ಪೋಳದ ವಂದಿಸಿದರು.
ಗಜೇಂದ್ರಗಡ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಗುರುವಂದನೆ: ಸ್ಥಳೀಯ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಡಾ. ಎಸ್. ರಾಧಾಕೃಷ್ಣನ್ 125ನೇ ಜಯಂತಿ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಎಂ.ಡಿ. ಸರಕಾವಸ, ರಾಧಾಕೃಷ್ಣನರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಫರೀದಾ ನಂದಿಹಾಳ ಮಾತನಾಡಿದರು. ಎ.ಬಿ. ರಡ್ಡೇರ, ಎ.ಎಂ. ಕೊಪ್ಪಳ, ಶಾನೂರ ಲಕ್ಷ್ಮೇಶ್ವರ, ಸುಮಯ್ಯ ಅತ್ತಾರ, ಮುಸ್ಕಾನ ಕಟ್ಟಿಮನಿ, ಫಾತೀಮಾ ದೊಡ್ಡಮನಿ, ರಜಿಯಾ ರಾಮತಾಳ, ಆಪ್ರೀನ್ ಸಣ್ಣಕ್ಕಿ, ಎಂ.ಝಡ್. ಬೆಲೇರಿ, ಬಿ.ಎ. ಡಾಲಾಯತ್, ಸಬಿಹಾ ಆಲೂರ, ಜೀವನಭಿ ಬೂದಿಹಾಳ ಇದ್ದರು.