ಗಣೇಶೋತ್ಸವದಲ್ಲಿ ರಕ್ತದಾನ ಶಿಬಿರ: ಪ್ರಶಂಸೆ
ಮುಂಡರಗಿ: ಗಣೇಶ ಹಬ್ಬದ ಅಂಗವಾಗಿ ಅನೇಕ ಜನರ ಜೀವ ಉಳಿಸಲು ಸಹಕಾರಿಯಾಗುವ ರಕ್ತದಾನ ದಾನ ಶಿಬಿರ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂತದ್ದು. ಪರೋಪಕಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ, ಒಂದು ಜೀವ ಉಳಿಸಲು ಅವಶ್ಯವಿರುವ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಜೈ ಜೈ ಗಣೇಶ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಅವರು ಶುಕ್ರವಾರ ಪಟ್ಟಣದ ಜೈ ಜೈ ಗಣೇಶ ಗೆಳೆಯರ ಬಳಗ, ಗದಗ ಬ್ಲಡ್ ಬ್ಯಾಂಕ್ ಆಶ್ರಯದಲ್ಲಿ ಗಣೇಶೋತ್ಸವ ಅಂಗವಾಗಿ ಅಗಲಿದ ಗೆಳೆಯರ ಸ್ಮರಣೆಗಾಗಿ ಸಮರ್ಥ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ರಾಜಶೇಖರ ಪವಾಡಶೆಟ್ಟರ ಮಾತನಾಡಿದರು. ಸಾನ್ನಿಧ್ಯವನ್ನು ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಆಯುರ್ವೇದಿಕ್ ಕಾಲೇಜಿನ ಗುರುಮೂರ್ತಿಸ್ವಾಮಿ ಅಳವಂಡಿ, ರಾಜಶೇಖರಗೌಡ ಮಾಲಿಪಾಟೀಲ, ಅಧ್ಯಕ್ಷ ಯಲ್ಲಪ್ಪ ತಾಮ್ರಗುಂಡಿ, ಶಂಕರ ಪಾಟೀಲ, ಮೌನೇಶ ಪತ್ತಾರ, ಆನಂದಗೌಡ ಪಾಟೀಲ, ಶ್ರೀಧರ ಹೊಸಮನಿ, ಲಿಂಗರಾಜಗೌಡ ಪಾಟೀಲ, ದೇವು ಹಡಪದ, ಎ.ಪಿ. ದಂಡಿನ ಮತ್ತಿತರರು ಉಪಸ್ಥಿತರಿದ್ದರು. ವೈ.ಎನ್. ಗೌಡರ ಸ್ವಾಗತಿಸಿ, ವಂದಿಸಿದರು.