ಪುಟ್ಟರಾಜರ ಸ್ವರಗಾನ ಸ್ಮರಣೋತ್ಸವ, ಮೆರವಣಿಗೆ
ಗದಗ: ಲಿಂ. ಶಿವಯೋಗಿ ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ತೃತೀಯ ಸ್ವರಗಾನ ಸ್ಮರಣೋತ್ಸವವನ್ನು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಭಕ್ತಿ, ಶೃದ್ಧೆಯಿಂದ ಆಚರಿಸಲಾಯಿತು.
ಗಾನಯೋಗಿ ಡಾ. ಪುಟ್ಟರಾಜ ಕಲಾ ಸಂಘ (ರಿ) ಗದಗ ಹಾಗೂ ಗದಗ ಜಿಲ್ಲಾ ಕೃಷಿ ಉಪಕರಣಗಳ ತಯಾರಕರ ಮತ್ತು ವಿತರಕರ ಸಂಘ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ವೀರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಬೃಹತ್ ಮೆರವಣಿಗೆಗೆ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಚಾಲನೆ ನೀಡಿದರು.
ಅಡ್ನೂರ ದಾಸೋಹಮಠದ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಮ್ಯಾನೇಜರ್ ವೇ. ಬಸವರಾಜಸ್ವಾಮಿ ಹಿಡ್ಕಿಮಠ, ಗಾನಯೋಗಿ ಡಾ. ಪುಟ್ಟರಾಜ ಕಲಾ ಸಂಘದ ಅಧ್ಯಕ್ಷ ಹೇಮರಾಜ ಶಾಸ್ತ್ರಿ ಹೆಡಿಗ್ಗೊಂಡ, ಉಪಾಧ್ಯಕ್ಷ ಮಡಿವಾಳೇಶ್ವರ ಶಾಸ್ತ್ರಿ ಜೇರಟಗಿ, ಕಾರ್ಯದರ್ಶಿ ಶಿವಲಿಂಗಯ್ಯ ಶಾಸ್ತ್ರಿ ಸಿದ್ಧಾಪುರ, ಸಿದ್ಧೇಶ್ವರ ಶಾಸ್ತ್ರಿಗಳು ತೆಲ್ಲೂರ, ವೀರೇಶ ಕಿತ್ತೂರ, ಮಹಾದೇವಪ್ಪ ಹಳ್ಳಿ, ಶಿವಾನಂದೀಶ್ವರ ಶಾಸ್ತ್ರಿ, ಶರಣಬಸವ ಆರ್. ಇಲಕಲ್, ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರಿ, ಮೃತ್ಯುಂಜಯ ಮುರಗೋಡ, ಐ.ಎಸ್. ಶಿವಕಾಳಿಮಠ, ಮಲ್ಲಿಕಾರ್ಜುನ ಕುರ್ತಕೋಟಿ, ಬಸವರಾಜ ಹಿರೇಮಠ, ಅರುಣ ಅಣ್ಣಿಗೇರಿ, ಕೆ.ಬಿ. ಪಾಟೀಲ, ವಿ.ಎಸ್. ಶಿವಕಾಳಿಮಠ, ವಿಶ್ವನಾಥ ಕಬಾಡಿ, ಎಸ್.ಎಸ್. ಬಿಜಾಪುರ, ಆಶ್ರಮದ ಗುರುಬಂಧುಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಪಿಪಿಜಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವೃಂದ, ಶಿಕ್ಷಕ, ಉಪನ್ಯಾಸಕ ವೃಂದ ಭಕ್ತ ಬಳಗದವರಿದ್ದರು. ಮುತ್ತೈದೆಯರು ಆರತಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.