ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೆಳ್ಳುಳ್ಳಿ ಬೆಲೆ ಕುಸಿತ: ಪ್ರತಿಭಟನೆ

Vishwanath S
Updated On : 15 Sept 2013, 12:20 pm

ಗದಗ: ಇಲ್ಲಿನ ಎಂಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಬೆಳ್ಳುಳ್ಳಿ ಬೆಲೆ ದಿಢೀರ್ ಕುಸಿತವಾದ ಹಿನ್ನಲೆಯಲ್ಲಿ ಆಕ್ರೋಶಗೊಂಡ ರೈತರು, ದಲ್ಲಾಳಿಗಳ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಎಪಿಎಂಪಿಯಲ್ಲಿನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ ಕೆಲ ದಿನಗಳಿಂದ ಬೆಳ್ಳುಳ್ಳಿ ಬೆಲೆ ರು. 6 ಸಾವಿರಗೆ ಕ್ವಿಂಟಾಲ್ ಮಾರಾಟ ಮಾಡಲಾಗುತ್ತಿತ್ತು. ಆದರೆ, ಶನಿವಾರ ಬೆಳಗ್ಗೆ ಬೆಳ್ಳುಳ್ಳಿ ಬೆಲೆಯು ರು. 6 ಸಾವಿರದಿಂದ ಕೇವಲ ರು. 1 ಸಾವಿರಕ್ಕೆ ದಿಢೀರ್ ಕುಸಿದಿದೆ. ಈ ರೀತಿ ಒಮ್ಮೆಲೆ ಬೆಲೆ ಕುಸಿತವಾಗುವುದು ಅಸಾಧ್ಯ. ದಿನನಿತ್ಯ ಮಾರಾಟ ಬೆಲೆಯಲ್ಲಿ ರು. 500ರಿಂದ ರು. 1 ಸಾವಿರವರೆಗೆ ಏರಿಳಿತವಾಗುವುದು ಸಾಮಾನ್ಯ ಆದರೆ, ಶುಕ್ರವಾರ ರು. 6 ಸಾವಿರಕ್ಕೆ ಮಾರಾಟವಾಗಿದ್ದ ಬೆಳ್ಳುಳ್ಳಿ ಇಂದು ಕೇವಲ ರು. 1 ಸಾವಿರ, ರು. 1050ಗೆ ಮಾರಾಟ ಮಾಡಲಾಗುತ್ತಿದೆ. ಇದು ಅಧಿಕಾರಿಗಳು ದಲ್ಲಾಳಿಗಳು ಹಾಗೂ ವರ್ತಕರು ಶಾಮೀಲು ಮಾಡಿಕೊಂಡು ರೈತರಿಗೆ ಅನ್ಯಾಯವನ್ನೆಸಗುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಈ ಕೂಡಲೇ ಬೆಳ್ಳುಳ್ಳಿಗೆ ಸೂಕ್ತ ಬೆಲೆ ನೀಡುವಂತೆ ರೈತರು ಆಗ್ರಹಿಸಿದರು. ಇದರಿಂದಾಗಿ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ರೈತರ ಮನವೊಲಿಸಿದರು. ನಂತರ ರೈತರ ಮುಂದೆಯೇ ರು. 3ರಿಂದ ರು. 5 ಸಾವಿರಕ್ಕೆ ಬೆಳ್ಳುಳ್ಳಿ ಮಾರಾಟ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement