ಕೇಶಾಲಂಕಾರ ಪುರಾತನ ಕಲೆ: ರಜನಿ
ಗದಗ: ಸಾಂಪ್ರದಾಯಿಕ ಉಡುಗೆ, ತೊಡುಗೆಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಆದಿ ಅರಸರ ಕಾಲದಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗಾಗಿ ವಿವಿಧ ಕೇಶಾಲಂಕಾರಗಳನ್ನು ಉಪಯೋಗಿಸುತ್ತಿದ್ದರು. ಇದು ಬಹು ಪುರಾತನ ಕಲೆ ಎಂದು ಮಹಿಳಾ ನಾಯಕಿ ರಜನಿ ಪಾಟೀಲಹೇಳಿದರು.
ಅವರು ಈಚೆಗೆ ಅಕ್ಕನ ಬಳಗದ ಸದಸ್ಯರಿಗಾಗಿ ವಿವಿಧ ಕೇಶಾಲಂಕಾರಗಳ ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿದರು.
ಆಯಾ ಹವಾಗುಣಕ್ಕೆ ಅನುಗುಣವಾಗಿ ಪ್ರಕೃತಿದತ್ತವಾದ ಸೌಂದರ್ಯವರ್ಧಕಗಳನ್ನು ಮನೆಯಲ್ಲಿಯೇ ತಯಾರಿಸಿ ಉಪಯೋಗಿಸುವಂತೆ ಅವರು ಸೂಚಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸ್ತೂರಿ ಹಿರೇಗೌಡರ, ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯುತ್ತದೆ ಎಂದರು.
ಸುನಂದಾ ಬಾವಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಕ್ಕನ ಬಳಗದ ಸದಸ್ಯನಿಯರಿಂದ ಸಾಮೂಹಿಕ ಪ್ರಾರ್ಥನೆ ಜರುಗಿತು. ಕೇಶಾಲಂಕಾರ ಸ್ಪರ್ಧೆಯಲ್ಲಿ ರತ್ನಾ ಹುಬಳಿಮಠ ಪ್ರಥಮ, ಅನ್ನಪೂರ್ಣ ಮಾಳೆಕೊಪ್ಪಮಠ, ದ್ವಿತೀಯ, ಪಾರ್ವತಿ ಮಾಳೆಕೊಪ್ಪಮಠ ತೃತೀಯ ಸ್ಥಾನ ಪಡೆದರು. ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡರ ಸ್ವಾಗತಿಸಿದರು. ಶೈಲಜಾ ಕವಲೂರ ನಿರೂಪಿಸಿದರು. ಮೀನಾಕ್ಷಿ ಸಜ್ಜನರ ವಂದಿಸಿದರು.
--
ಜೀವನ ಶ್ರೇಯಸ್ಸಿಗೆ ಗುರುಕಾರುಣ್ಯ ಆವಶ್ಯ
ಗದಗ: ಜೀವನದ ಶ್ರೇಯಸ್ಸಿಗೆ ಗುರುಕಾರುಣ್ಯ ಅವಶ್ಯವಾಗಿದೆ ಎಂದು ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಹೇಳಿದರು.
ಅವರು ಈಚೆಗೆ ಸ್ಥಳೀಯ ಕೆಎಸ್ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜದಲ್ಲಿ ಶಿಕ್ಷಕನ ಪಾತ್ರ ಹಿರಿದಾಗಿದೆ. ಶಿಕ್ಷಕರ ಮಾರ್ಗದರ್ಶನಲ್ಲಿ ವಿದ್ಯಾರ್ಥಿಗಳು ಮುನ್ನೆಡೆಯುತ್ತಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಬದಲಾಯಿಸುವ ಶಿಕ್ಷಕ ಸಮಾಜದ ಕಣ್ಣು ಎಂದರು. ನಿವೃತ್ತ ಶಿಕ್ಷಕ ಎಸ್.ಎಚ್. ದೇಶಪ್ಪನವರ, ಆರ್.ವಿ. ದೇಶಪಾಂಡೆ, ಸುರಕೋಡ ಹಾಗೂ ಡಾ. ಎಂ.ಎ. ರಾಟಿ ಅವರನ್ನು ಸನ್ಮಾನಿಸಲಾಯಿತು. ಡಾ. ಎಂ.ಎಸ್. ನರೇಗಲ್, ಡಾ. ಟಿ.ಎನ್. ಗೋಡಿ, ಉಷಾ ಪೂಜಾರ ಹಾಜರಿದ್ದರು. ಕುಮಾರ ಹ್ಯಾಟಿ ಸ್ವಾಗತಿಸಿದರು. ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸಯ್ಯ ನಿರೂಪಿಸಿದರು. ವಿ.ಡಿ. ಬೆಳ್ಳಿ ವಂದಿಸಿದರು.
--