ಛಲವಿದ್ದರೆ ಏನಾದರೂ ಸಾಧಿಸಬಹುದು: ಖಾಜಿ
ಗದಗ: ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವಿದಿದ್ದರೆ ಏನನ್ನಾದರೂ ಸಾಧಿಸಿ ತೋರಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಎಸ್.ಎನ್.ಖಾಜಿ ಹೇಳಿದರು.
ಅವರು ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಜಾನನೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಬೋಧನಾ ಮತ್ತು ಕಲಿಕೆ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ಕಲಿಕೆ ನಿರಂತರ, ಹುಟ್ಟಿನಿಂದ ಪ್ರಾರಂಭವಾದ ಕಲಿಕೆ ಕೊನೆಯವರೆಗೂ ಇರುತ್ತದೆ. ತಾಯಿ ಮೊದಲನೇ ಶಿಕ್ಷಕಿ. ಶಿಕ್ಷಕ ಎನ್ನುವವರು ಮಾರ್ಗದರ್ಶಕ ಹಾಗೂ ಗೈಡ್ ಇದ್ದಂತೆ. ಶಿಕ್ಷಕ ಮಕ್ಕಳಿಗೆ ಮಾದರಿಯಾಗಿ ಪಾಠಬೋಧನೆ ಮಾಡಬೇಕು. ಒಬ್ಬ ಶಿಕ್ಷಕ ಸದಾಕಾಲ ಅಧ್ಯಯನಶೀಲರಾದಲ್ಲಿ ಮಾತ್ರ ಉತ್ತಮ ಪಾಠಬೋಧನೆ ಮಾಡಬಲ್ಲನು. ಶಿಕ್ಷಕರು ಪ್ರಾಯೋಗಿಕವಾಗಿ ಕ್ರಿಯಾಶೀಲರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ-ಬೆಟಗೇರಿ ನಗರಸಭೆ ಸದಸ್ಯ ಅನಿಲ ಸಿಂಗಟಾಲಕೇರಿ ಮಾತನಾಡಿದರು. ಪ್ರಾಚಾರ್ಯ ವೈ.ಆರ್. ಹಿರೇಗೌಡರ ಸ್ವಾಗತಿಸಿದರು. ಶಿಕ್ಷಕ ವಿ.ಜಿ. ಕಾಂಬಳೇಕರ ನಿರೂಪಿಸಿದರು. ಎಚ್.ಎಸ್. ಬ್ಯಾಳಿ ವಂದಿಸಿದರು.