ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ

Lingaraj Badiger
Updated On : 16 Sept 2013, 11:28 am

ಗದಗ:  ಪ್ರತಿ ವಿದ್ಯಾರ್ಥಿಯಲ್ಲಿ ಪ್ರೀತಿ, ವಿಶ್ವಾಸ, ಸಹಕಾರ, ಸಹನೆ, ಸಹೋದರತ್ವ ಬೆಳೆದು ಸಾಮಾಜಿಕ ಸಾಮರಸ್ಯ ಹಾಗೂ ಸಾಂಸ್ಕೃತಿಕ ಬೆಳವಣಿಗೆ ಬೆಳೆಯಬೇಕೆಂದು ಜಿಸಿಟಿಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ವೈ. ಹರ್ಲಾಪುರ ಹೇಳಿದರು.
ಅವರು ಈಚೆಗೆ ತಾಲೂಕಿನ ಹುಲಕೋಟಿ ಗ್ರಾಮದ ಜಿಸಿಟಿಎಂ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನದ ಆಚರಣೆಯ ಕುರಿತು ವಿದ್ಯಾರ್ಥಿನಿಯರು ವಿಷಯ ಮಂಡಿಸಿದರು. ರಾಷ್ಟ್ರೀಯ ಸದ್ಭಾವನಾ ದಿನದ ಕುರಿತಾಗಿ ವಿದ್ಯಾ ಕಿರೇಸೂರ, ಅಲ್ಪ ಸಂಖ್ಯಾತರ ಕಲ್ಯಾಣ ದಿನ ಕುರಿತಾಗಿ ಸುಮಿತ್ರಾ ತೆರಗುಂಟಿ, ಭಾಷಾ ಸೌಹಾರ್ದತಾ ದಿನ ಕುರಿತು ಸುಷ್ಮಾ ಚಿಟ್ಟಿ, ದುರ್ಬಲ ವರ್ಗಗಳ ದಿನ ಕುರಿತು ಪ್ರೀತಿ ಅಕ್ಕಿ, ಸಾಂಸ್ಕೃತಿಕ ಏಕತಾ ದಿನ ಕುರಿತು ರೇಣುಕಾ ಮಡಿವಾಳರ, ಮಹಿಳಾ ದಿನ ಕುರಿತು ಪ್ರಿಯಾಂಕ ಹಿರೇಮಠ ಹಾಗೂ ಪರಿಸರ ರಕ್ಷಣಾ ದಿನ ಕುರಿತು ಅಕ್ಷತಾ ಗಾಣಿಗೇರ ಪ್ರಬಂಧ ಮಂಡಿಸಿದರು.
ಬಿ.ವೈ. ನರೇಗಲ್, ಡಾ. ಎ.ವೈ. ಗೊಳಸಂಗಿ, ಎಸ್.ಎ. ದೇಶಪಾಂಡೆ, ಆರ್.ಸಿ. ದಿನ್ನಿ, ಎಸ್.ಎಂ. ದುಂದೂರ, ಕೆ.ಎಂ. ಗರಗ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement