ಸ್ವಾಗತ ಸಮಾರಂಭ
ನರೇಗಲ್ಲ: ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗೆ ಶೈಕ್ಷಣಿಕ ಕ್ಷೇತ್ರ ಅವಿರತವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅನ್ನದಾನೇಶ್ವರ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎ.ಕೆ.ನಾಶಿ ಹೇಳಿದರು.
ಅವರು ಶುಕ್ರವಾರ ಸ್ಥಳಿಯ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಚಾರ್ಟರ್ಡ್ ಅಕೌಂಟೆಂಟ್ ಕೆ.ಎಸ್.ಚಟ್ಟಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅರವಿಂದ ಸಜ್ಜನ ಮಾತನಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಎಸ್.ವಿ. ಸಂಕನೂರ, ಉಪನ್ಯಾಸಕ ಎನ್.ಕೆ. ಬೇವಿನಕಟ್ಟಿ, ಮಾಲತಿ ಧರ್ಮಾಯತ, ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಶ್ರಿದೇವಿ ನಾಶಿಪುಡಿ, ಉನ್ಯಾಸಕ ಎಂ.ಎಸ್. ಕುಲಕರ್ಣಿ, ಬಿ.ಎಸ್. ಕಳಕೊಣ್ಣವರ, ಎ.ಎಸ್. ಗಡ್ಡದ, ಎಸ್.ಬಿ. ನಾಗಠಾಣ ಇದ್ದರು. ಸುರೇಶ ವಕ್ಕಾರ ಸ್ವಾಗತಿಸಿದರು.
ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ: ವಿಜಯೋತ್ಸವ
ಗಜೇಂದ್ರಗಡ: ನರೇಂದ್ರ ಮೋದಿಯವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ ಕಾಲಕಾಲೇಶ್ವರ ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಬಿಜೆಪಿ ನಗರ ಘಟಕದ ಅಧ್ಯಕ್ಷ ಭಾಸ್ಕರ ರಾಯಬಾಗಿ ಮಾತನಾಡಿ, ಗುಜರಾತ್ ಮುಖ್ಯಮಂತ್ರಿ ಹಾಗೂ ಮುಂದಿನ ಬಿಜೆಪಿ ನೇತೃತ್ವದ ಪ್ರಧಾನಮಂತ್ರಿ ಅಭ್ಯರ್ಥಿಯಾದ ನರೇಂದ್ರ ಮೋದಿ ದೇಶದ ಕೊಟ್ಯಾಂತರ ಯುವಕರ ಕಣ್ಮಣಿ. ಇಂತಹ ಸಮರ್ಥ ನಾಯಕನ ಸಾರಥ್ಯದಲ್ಲಿ ಎನ್ಡಿಎ ನೇತೃತ್ವದ ಬಿಜೆಪಿ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ದೇಶದ ಚುಕ್ಕಾಣೆ ಹಿಡಿದು ಭ್ರಷ್ಟ ಯುಪಿಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಹೀನಾಯ ಸೋಲಿನ ರುಚಿ ತೋರಿಸಲಿದೆ ಎಂದರು. ಪುರಸಭೆಯ ಸದಸ್ಯ ಸಿದ್ದಪ್ಪ ಬಂಡಿ, ಪುರಸಭೆಯ ಸದಸ್ಯೆ ಕವಿತಾ ಜಾಲಿಹಾಳ, ವಿಜಯಲಕ್ಷ್ಮೀ ಚಟ್ಟೇರ, ಸುಮಿತ್ರಾ ತೊಂಡಿಹಾಳ, ಪ್ರಭು ಚವಡಿ, ಅಶೋಕ ಶೆಟ್ಟರ, ಚನ್ನಪ್ಪ ಮ್ಯಾಗೇರಿ, ಅಂಬರೇಶ ಬಳಿಗೇರ ಇದ್ದರು.
ಸಂಗೀತ ಕಾರ್ಯಕ್ರಮ
ಗದುಗ: ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಗದಗ ಉತ್ಸವದಲ್ಲಿ ಗದಗನ ಸಮರ್ಥ ದೇಸಾಯಿ ಹಾಗೂ ಧಾರವಾಡ ಆಕಾಶವಾಣಿ ಕಲಾವಿದ ಚಿನ್ಮಯ ಅವರ ಗಿಟಾರ ಹಾಗೂ ವಾಯೋಲಿನ್ ಜುಗಲ್ಬಂದಿ ಕಾರ್ಯಕ್ರಮ ಜನರನ್ನು ರಂಜಿಸಿತು. ತಬಲಾ ಸಾಥ್ ಹನುಮಂತ ಕೊಡಗಾನೂರ ಹಾಗೂ ಚಾರ್ಲ್ಸ್ ಖೋಡೆ ರೀಧಂ ಪ್ಯಾಡ್ ಸಾಥ್ ನೀಡಿದರು.