ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾರೀರಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯ

Lingaraj Badiger
Updated On : 17 Sept 2013, 11:37 am

ಕನ್ನಡಪ್ರಭ ವಾರ್ತೆ ನರೇಗಲ್ಲ, ಸೆ. 16
ಶಾರೀರಿಕ, ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯ ಎಂದು ನರೇಗಲ್ಲ ಪಿಎಸ್‌ಐ ಎಸ್.ಎನ್. ಅಂಬಿಗೇರ ಹೇಳಿದರು.
ಅವರು ಸೋಮವಾರ ಸ್ಥಳೀಯ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕವಿವಿ ಮಹಿಳೆಯರ ಖೋಖೋ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆ ಆಟ ಮೇಲಾಟಗಳನ್ನು ಒಳಗೊಂಡಿರುವಂತದ್ದು, ಇದರಿಂದ ಮಗು ಶಾರೀರಿಕವಾಗಿ, ಮಾನಸಿಕವಾಗಿ ಸದೃಢವಾಗುತ್ತದೆ. ವಿನಯ ಶೀಲತೆ, ವಿಧೇಯತೆ, ಸ್ಪರ್ಧಾ ಮನೋಭಾವನೆ ಮತ್ತಿತರ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಆಟೋಟಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಂಯಮ, ಸಹಕಾರ ಭಾವೈಕ್ಯತೆ ಜತೆಗೆ ಮನರಂಜನೆ ದೊರೆಯುತ್ತದೆ ಎಂದರು. ಸಾನ್ನಿಧ್ಯವಹಿಸಿದ್ದ ಹಾಲಕೇರಿಯ ಅನ್ನದಾನ ಶ್ರೀಗಳು ಆಶೀರ್ವಚನ ನೀಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಪ್ರತಿಯೊಂದು ರಂಗದಲ್ಲಿ ಅದರಲ್ಲೂ ಕ್ರೀಡೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿದ್ದಾಳೆ. ಕ್ರೀಡೆಯಲ್ಲಿ ಸೋಲು, ಗೆಲವು ಸಾಮಾನ್ಯ, ಆದರೆ ಪ್ರತಿಯೊಬ್ಬ ಮಹಿಳೆಯಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕಿ ಕೆ.ಆರ್. ಪಾಟೀಲ ಹಾಗೂ ಅಧ್ಯಕ್ಷತೆ ವಹಿಸಿದ್ದ ಅನ್ನದಾನೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಸಜ್ಜನ ಕ್ರಿಡಾಪಟುಗಳನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಐ. ಬಿಸನಳ್ಳಿ, ಸಿ.ಜಿ. ಹುಡೇದಗಡ್ಡಿ, ಎಸ್.ಬಿ. ಗೌಡರ, ಡಾ. ಎ.ಕೆ. ನಾಶಿ, ಎಸ್.ಎಚ್. ಕುಲಕರ್ಣಿ, ಎಂ.ಎಸ್. ಕುಲಕರ್ಣಿ ಎಸ್.ಜಿ. ಕೇಶಣ್ಣವರ, ಜಮುಖಾನಾ ಎಸ್.ಡಿ. ಪಾಟೀಲ, ಮಧುಮತಿ ಶಿರಹಟ್ಟಿ, ಎಸ್.ಎಸ್. ಕಂಠಿ, ಡಾ. ಶಿವರಾಂ, ಡಾ. ಎ.ಬಿ. ಮಂಗಳೂರ, ಎಲ್.ಸಿ. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಜಿ.ಜಿ. ಕೋಟಿ ಸ್ವಾಗತಿಸಿದರು. ಎಸ್.ಎಚ್. ಕುಲಕರ್ಣಿ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಬಿ.ಎಸ್. ಗೌಡರ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement