ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಶಿರಹಟ್ಟಿಗೆ ಮಾಜಿ ಸಚಿವ ಹೊರಟ್ಟಿ

Mainashree
Updated On : 19 Sept 2013, 10:55 am

ಗದಗ: ಜಿಲ್ಲೆಯ ಶಿರಹಟ್ಟಿಗೆ ಸೆ.19ರಂದು ಮಾಜಿ ಸಚಿವ, ವಿಪ ಸದಸ್ಯ ಬಸವರಾಜ ಹೊರಟ್ಟಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸುವರು. ಅಂದು ಬೆಳಗ್ಗೆ 10.30 ಗಂಟೆಗೆ ಎಸ್.ಎಂ. ಡಬಾಲಿ ಪಪೂ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪಪೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ 12 ಗಂಟೆಗೆ ಸಿ.ಸಿ. ನೂರಶೆಟ್ಟರ ಪ್ರೌಢಶಾಲೆ ಶಿರಹಟ್ಟಿ, ಮಧ್ಯಾಹ್ನ 1 ಗಂಟೆಗೆ ಸರ್ಕಾರಿ ಪೌಢಶಾಲೆ, ಮಧ್ಯಾಹ್ನ 2 ಗಂಟೆಗೆ ಸರ್ಕಾರಿ ಪಪೂ ಕಾಲೇಜು, ಮಧ್ಯಾಹ್ನ 3.30 ಗಂಟೆಗೆ ಸರ್ಕಾರಿ ಉರ್ದು ಪ್ರೌಢಶಾಲೆ, ಮಧ್ಯಾಹ್ನ 4.30 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಮಾಗಡಿ ಹಾಗೂ ಸರ್ಕಾರಿ ಪಪೂ ಕಾಲೇಜು ಮಾಗಡಿಗೆ ಭೇಟಿ ನೀಡಿ ಶಿಕ್ಷಕ/ ಶಿಕ್ಷಕೇತರ ಸಮಸ್ಯೆಗಳಿಗೆ ಹೊರಟ್ಟಿಯವರು ಸ್ಪಂದಿಸಲಿದ್ದು, ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಶಿರಹಟ್ಟಿ ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಉಪಾಧ್ಯಕ್ಷ ಎಸ್.ಎಂ. ಅಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ಇಂದು ಶಿವಾನುಭವಗೋಷ್ಠಿ
ಗದಗ:  ತಾಲೂಕಿನ ಬಳಗಾನೂರ ಗ್ರಾಮದ ಚಿಕೇನುಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಸೆ. 19ರ ಸಂಜೆ 5.30 ಗಂಟೆಗೆ 396ನೇ ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಶ್ರೀಮಠದ ಶಿವಶಾಂತವೀರ ಶ್ರೀಗಳು ವಹಿಸುವರು. ಉಪನ್ಯಾಸಕರಾಗಿ ಪ್ರೊ. ಬಿ.ಎಚ್. ಹೂಗಾರ ಆಗಮಿಸುವರು. ಇದೇ ಸಂದರ್ಭದಲ್ಲಿ ಬಾಲು ಜಾಧವ ಹಾಗೂ ಇಮಾಮಸಾಬ್ ಇನಾಮದಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ನೀರು ಪೂರೈಕೆ ಮಾಹಿತಿ
ಗದಗ:  ಇಲ್ಲಿಯ ಎಸ್.ಎಂ. ಕೃಷ್ಣ ನಗರದ ಉಳಿದ ಭಾಗಗಳು, ಬಡಿಗೇರ ಲೈನ್, ಟೇಲರ್ ಲೈನ್, ದರ್ಘಾ ಲೈನ್, ಟಾಂಗಾ ಲೈನ್, ಮುಜಾವರ ಲೈನ್, ಇಸ್ಮಾಯಿಲ್ ಲೈನ್, ಭಜಂತ್ರಿ ಲೈನ್, ಮುನ್ನಾ ಲೈನ್, ಹೊಸಮನಿ ಲೈನ್, ವಡವಿ ಟೀಚರ ಲೈನ್, ವಕೀಲರ ಲೈನ್, ಕ್ರಿಶ್ಚಿಯನ್ ಕಾಲೋನಿ ಭಾಗ 1 ಮತ್ತು 2, ಗ್ವಾಡಿಯವರ ಲೈನ್, ಗೌರಿಗುಡಿ ಲೈನ್, ಬುರಡೆಯವರ ಲೈನ್, ಬ್ಯಾಳಿಯವರ ಲೈನ್, ಟರ್ನಲ್‌ಪೇಟೆ, ಮೈಲಾರಪ್ಪನ ಲೈನ್, ಐಲಿ ಲೈನ್, ಕಂಬಾರ ಲೈನ್, ಗೋಖಲೆ ಲೈನ್, ಶಿರಗೇರಿ ಲೈನ್, ವಾಲ್ಮೀಕಿ ನಗರ, ಬಾಗಮ್ಮ ಲೈನ್, ಬಿ.ಕೆ. ಆನಂದ ಲೈನ್, ಮಲ್ಲೇಶಪ್ಪನ ಲೈನ್, ನಾಗಲಿಂಗೇಶ್ವರ ಗುಡಿ ಲೈನ್, ಬಾಂಬೆಹೌಸ್ 200 ಮನೆ ಲೈನ್, ಟೆಲಿಫೋನ್ ಆಫೀಸ್, ಟೆಲಿಫೋನ್ ಬಂಕ್, ನೇಖಾರಿ ಕಾಲೋನಿ, ವಸಂತಸಿಂಗ್ ಜಮಾದಾರ ನಗರ ಈ ಭಾಗಗಳಲ್ಲಿ ಗುರುವಾರ ತುಂಗಭದ್ರಾ ನದಿನೀರು ಪೂರೈಕೆ ಮಾಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement