ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ ಅಭ್ಯರ್ಥಿಗೆ ಮತನೀಡಿ: ಶಾಸಕ ದೊಡ್ಡಮನಿ

Mainashree
Updated On : 20 Sept 2013, 10:33 am

ಮುಂಡರಗಿ: ಸೆ. 29ರಂದು ನಡೆಯಲಿರುವ ಹಮ್ಮಿಗಿ ಜಿಪಂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರುದ್ರಗೌಡ ಶಂಕರಗೌಡ ಪಾಟೀಲರಿಗೆ ಎಲ್ಲರೂ ಒಮ್ಮನಸ್ಸಿನಿಂದ ಮತನೀಡಬೇಕೆಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಬುಧವಾರ ಹಮ್ಮಿಗಿ ಜಿಪಂ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಹಾಕಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಹಮ್ಮಿಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.ವಾಸಣ್ಣ ಕುರುಡಗಿ ಮಾತನಾಡಿ, ಬಡವರ ಹಾಗೂ ಹಿಂದುಳಿದವರ ಪರವಾಗಿರುವ ಶಂಕರಗೌಡರ ಮನೆತನಕ್ಕೆ ಕಾಂಗ್ರೆಸ್ ಟಿಕೇಟ್ ನೀಡಿದ್ದು,  ಮತದಾರರು ಅವರಿಗೆ ಅವಕಾಶ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ಚಂದ್ರಹಾಸ ಉಳ್ಳಾಗಡ್ಡಿ, ಕೊಟ್ರೇಶ ಅಂಗಡಿ, ಡಾ. ಬಸವರಾಜ ಮೇಟಿ, ಪ್ರೊ. ವೀರಣ್ಣ ಮೇಟಿ, ವಿ.ಎಲ್. ನಾಡಗೌಡ್ರ, ಅಭ್ಯರ್ಥಿ ರುದ್ರಗೌಡ ಪಾಟೀಲ ಮಾತನಾಡಿದರು. ಎಸ್.ಡಿ. ಮಕಾಂದಾರ, ಧ್ರುವಕುಮಾರ ಹೊಸಮನಿ, ಭೀಮಸಿಂಗ್ ರಾಠೋಡ, ರವಿ ದಂಡಿನ, ರಾಮಾಂಜನೇಯರಾಜು ಪೆನ್‌ಮತ್ಸ, ರಾಮಣ್ಣ ಬಳ್ಳಾರಿ, ಬಸವರಾಜ ರಾಮೇನಹಳ್ಳಿ, ಬಸವರಾಜ ಬಿಸನಳ್ಳಿ, ವೀರೇಶ ಸಜ್ಜನರ, ಡಿ.ಡಿ. ಮೋರನಾಳ, ಪಿ.ಎಂ. ಪಾಟೀಲ, ಸೊಲಬಣ್ಣ ಜೋಬಾಳಿ, ಪಾಲಾಕ್ಷಿ ಗಣದಿನ್ನಿ, ನಾಗೇಶ ಹುಬ್ಬಳ್ಳಿ, ಗಂಗಣ್ಣ ಸೊರಟೂರ, ಪ್ರಹ್ಲಾದ ಹೊಸಮನಿ, ನಾಗರಾಜ ಹೊಂಬಳಗಟ್ಟಿ, ಶಂಕರಗುರು ಬಿಳಿಮಗ್ಗದ, ಯಲ್ಲಪ್ಪ ಗಣಾಚಾರಿ ಇದ್ದರು. ರಾಮು ಕಲಾಲ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement