ಸುದ್ದಿ ಸಂಕ್ಷೇಪ
ಯೋಗ ಸ್ಪರ್ಧೆಯಲ್ಲಿ ಆಯ್ಕೆ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ಅಮರೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾಮಟ್ಟದ ಯೋಗ ಸ್ಫರ್ಧೆಯಲ್ಲಿ ಬಿ.ಎಂ. ಪಾಟೀಲ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರಕಾಶ ಪತ್ತಾರ, ಭೀಮರಾಜ ಹುನಗುಂಡಿ, ಗಂಗಾಧರ ಕುಂಬಾರ, ಅಕ್ಷತಾ ಕೊಣ್ಣೂರ, ರತ್ನಾ ಮುದೇನಗುಡಿ, ಗಂಗಮ್ಮ ಬಾರಕೇರ, ಚೈತ್ರಾ ಕಲಾದಗಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಸಂಸ್ಥೆಯ ಅಧ್ಯಕ್ಷ ಬಿ.ವಿ. ಪಾಟೀಲ, ಮುದಿರಪ್ಪ ಕಲಾದಗಿ, ಶೇಖರಯ್ಯ ನಾಗಲೋಟಮಠ, ಈರಯ್ಯ ಹುಬ್ಬಳ್ಳಿ, ಜಿ.ವಿ. ಕಾಡದೇವರಮಠ, ಮುತ್ತಣ್ಣ ಚಿಕ್ಕನರಗುಂದ, ಎಸ್.ಎನ್. ತೀರಕನಗೌಡ್ರ ಹಾಗೂ ಮುಖ್ಯೋಪಾಧ್ಯಾಯ ಎಸ್.ಪಿ. ಬಿಡಿಕರ, ಸಹಶಿಕ್ಷಕರಾದ ಆರ್.ಡಿ. ಮಾದರ, ಎಸ್.ಎಚ್. ಕೆಳಗಡೆ, ಆರ್.ಎಲ್. ಪಾಟೀಲ, ಟಿ.ಎಂ. ನೀಲಣ್ಣವರ, ಎಸ್.ಜಿ. ರಾಜನಾಳ, ಎ.ಆರ್. ನಾಯಕ, ಡಿ.ಎಚ್. ಪಂಡರಿ, ಎಸ್.ವಿ. ಹೂಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಹಂದಿ ಮಾಲೀಕರಿಗೆ ಸೂಚನೆ
ಗದಗ: ಎಲ್ಲ ಹಂದಿ ಮಾಲೀಕರು, ಸಾಕಾಣಿಕೆದಾರರು, ಹಂದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟಿದ್ದು, ಅವುಗಳಿಂದ ನಗರದಲ್ಲಿ ಅತೀ ಗಲೀಜು ಆಗುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಕಾರಣ ಈ ಪ್ರಕಟಣೆ ಪ್ರಕಟವಾದ 7 ದಿನದೊಳಗಾಗಿ ನಿಮ್ಮ ಹಂದಿಗಳನ್ನು ಊರ ಹೊರಗೆ ಸಾಗಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಸಾಕಾಣಿಕೆ ಮಾಡಬೇಕು. ಸಾರ್ವಜನಿಕರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಾಗದಂತೆ ಸಾಕುವ ಪದ್ಧತಿಯನ್ನು ನಗರಸಭೆ ಪೂರ್ವಾನುಮತಿ ಪಡೆದು ನಿರ್ವಹಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಅವಳಿ ನಗರದಲ್ಲಿ ಕಂಡು ಬರುವ ಹಂದಿಗಳ ಮಾಲೀಕರು, ಸಾಕಾಣಿಕೆದಾರರ ವಿರುದ್ಧ ನಗರ, ಪುರಸಭೆ 1964 ರ ಕಲಂ 223ರ ಪ್ರಕಾರ ಕ್ರಮ ಕೈಗೊಳ್ಳುವುದಲ್ಲದೇ, ಹಂದಿಗಳನ್ನು ಊರ ಹೊರಗೆ ಸಾಗಿಸಲಾಗುವುದು. ಹಾಗೇ ಸಾಗಿಸುವಾಗ ಆಗುವ ಹಾನಿಗಳಿಗೆ ನಗರಸಭೆಯು ಹೊಣೆಯಾಗಿರುವುದಿಲ್ಲ. ನಗರಸಭೆಯಿಂದ ಕ್ರಮ ಜರುಗಿಸಿದ ನಂತರದಲ್ಲಿ ಹಂದಿಗಳ ಮಾಲೀಕರು ತಮ್ಮ ಹಂದಿಗಳೆಂದು ವಿನಂತಿಸಿದಲ್ಲಿ ಅಂತಹ ಮಾಲೀಕರಿಗೆ ರು. 5 ಸಾವಿರ ದಂಡ ವಸೂಲಾತಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ದೇವರಡ್ಡಿ ನಿಧನ
ಗದಗ: ತಾಲೂಕಿನ ಕುರ್ತಕೋಟಿ ಗ್ರಾಮದ ಕೃಷಿಕ ದೇವರಡ್ಡಿ ವೆಂಕರಡ್ಡಿ ಹೊಸಮನಿ(92) ಅವರು ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.
ಸಂತಾಪ: ಮಾಜಿ ಶಾಸಕ ಡಿ.ಆರ್. ಪಾಟೀಲ, ಕುರ್ತಕೋಟಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ, ವಿಜಯಕುಮಾರ ಇನಾಮತಿ, ಜಿಪಂ ಸದಸ್ಯೆ ಅನ್ನಪೂರ್ಣ ಡಬಾಲಿ ಸಂತಾಪ ಸೂಚಿಸಿದ್ದಾರೆ.
ರತ್ನಾ ಕಲ್ಮಠ ನಿಧನ
ಮುಂಡರಗಿ: ತಾಲೂಕಿನ ಹಮ್ಮಿಗಿ ಗ್ರಾಮದ ನಿವಾಸಿ ರತ್ನಾ ಅಂದಾನಯ್ಯ ಕಲ್ಮಠ (36) ಅವರು ಬುಧವಾರ ಸಂಜೆ ನಿಧನರಾದರು. ಮೃತರಿಗೆ ಪತಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.