ಡಾ. ಪುಟ್ಟರಾಜರ ಸಂಗೀತ ಪಾಠಶಾಲೆ ಪ್ರಗತಿಗೆ ಸಹಕರಿಸಿ
ನರೇಗಲ್ಲ: 3 ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಡಾ.ಪಂ. ಪುಟ್ಟರಾಜರ ಸಂಗೀತ ಪಾಠಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲು ಎಲ್ಲರೂ ಸಹಕರಿಸಬೇಕೆಂದು ನಿವೃತ್ತ ದೈಹಿಕ ನಿರ್ದೇಶಕ ಕೆ.ಐ. ಬಿಸನಳ್ಳಿ ಹೇಳಿದರು.
ಅವರು ಈಚೆಗೆ ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಡಾ.ಪಂ. ಪುಟ್ಟರಾಜ ಸಂಗೀತ ಪಾಠಶಾಲೆಯ ಸದಸ್ಯರ ಸಭೆಯಲ್ಲಿ ಮಾತನಾಡಿದರು. ನರೇಗಲ್ಲದಲ್ಲಿ ಸಂಗೀತ ಪಾಠಶಾಲೆಯ ಕೊರತೆಯಿತ್ತು. ಅದನ್ನು ಮನಗಂಡ ನಿವೃತ್ತ ಮುಖ್ಯೋಪಾಧ್ಯಾಯ ಸಿ.ವಿ. ವಂಕಲಕುಂಟಿ ಗದುಗಿನ ಸಂಗೀತ ಶಿಕ್ಷಕ ಶ್ರೀಕಾಂತ ಹೂಲಿಯರವನ್ನು ನರೇಗಲ್ಲಿಗೆ ಕರೆತರುವ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಕಾರ ಮಾಡಿದ್ದಾರೆ ಎಂದರು. ಉಪನ್ಯಾಸಕ ಸಿ.ಜಿ. ಹುಡೇದಗಡ್ಡಿ, ಮುತ್ತಣ್ಣ ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಅಧ್ಯಕ್ಷ ಎಸ್.ಎ. ಪಾಟೀಲ, ಶಿಕ್ಷಕ ಹಿರೇಮಠ, ವಿಜಯಕುಮಾರ ಅಂಗಡಿ, ಕೆ.ಪಿ. ಸಾಲಿಮಠ, ಎಲ್.ಜಿ. ಗ್ರಾಮಪುರೋಹಿತ ಮುಂತಾದವರು ಉಪಸ್ಥಿತರಿದ್ದರು. ಸಿ.ವಿ. ವಂಕಲಕುಂಟಿ ನಿರೂಪಿಸಿದರು. ಬೆಲ್ಲದ ವಂದಿಸಿದರು.