ನಾಳೆ ರಾಜ್ಯಮಟ್ಟದ ಸಭೆ
ನರೇಗಲ್ಲ: ಎಂಫಿಲ್ ಪದವೀಧರರ (ಜುಲೈ 2009ರ ಒಳಗಾಗಿ ಎಂಫಿಲ್ ಪಡೆದವರು) ರಾಜ್ಯ ಮಟ್ಟದ ಸಭೆಯನ್ನು ಸೆ. 22ರ ಬೆಳಗ್ಗೆ 11ಕ್ಕೆ ಗಾಂಧಿ ವೃತ್ತದ ಬಳಿ ಇರುವ ಎಕ್ಸ್‌ಲೆಂಟ್ ಸಿಇಟಿ ಕೋಚಿಂಗ್ ಸೆಂಟರ್‌ನಲ್ಲಿ ಕರೆಯಲಾಗಿದೆ. ಹೋರಾಟದ ರೂಪರೇಷಗಳ ಕುರಿತು ಚರ್ಚಿಸಲಾಗುವುದು. ಸಭೆಗೆ ರಾಜ್ಯದ ಎಂಫಿಲ್ ಪದವೀಧರರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೈ.ಸಿ. ಪಾಟೀಲ-9916337700, ಎಂ.ಡಿ. ಕೊಳ್ಳಿ-9743967496 ಹಾಗೂ ಆರ್.ಎಸ್. ಉಪ್ಪಲದಿನ್ನಿ-8050389214 ಸಂಪರ್ಕಿಸುವಂತೆ ಪ್ರೊ. ಎ.ಎಂ. ನದಾಫ ತಿಳಿಸಿದ್ದಾರೆ.
ಇಂದು ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ
ಗದಗ: ತಾಲೂಕು ಪಂಚಾಯತ ಆವರಣದಲ್ಲಿ ಸೆ. 21ರಂದು ಸಂಜೆ 6ಕ್ಕೆ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಹುಲಕೋಟಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್.ಎಫ್. ಲೊಟಗೇರಿ ಇವರು ಸಂಚಿ ಹೊನ್ನಮ್ಮನ ಹದಿಬದಿ ಧರ್ಮ ಕುರಿತು ಉಪನ್ಯಾಸ ನೀಡುವರು. ಕವಿ ಎಂ.ಪಿ. ರಮೇಶ ಚುಟುಕು ಕವಿತೆಗಳನ್ನು ವಾಚನ ಮಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಅಧ್ಯಕ್ಷತೆ ವಹಿಸುವರು. ಸದಸ್ಯರು, ಸಾಹಿತ್ಯಾಭಿಮಾನಿಗಳು, ಮಹಿಳಾ ಸಾಹಿತಿಗಳು, ಶಾಲಾ ಕಾಲೇಜುಗಳ ಶಿಕ್ಷಕ, ವಿದ್ಯಾರ್ಥಿಗಳು ಆಗಮಿಸಬೇಕು ಎಂದು ಪ್ರಕಟಣೆ ತಿಳಿಸಿದೆ.