ದೈಹಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ
ಕನ್ನಡಪ್ರಭ ವಾರ್ತೆ, ಗದಗ, ಸೆ. 22
ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆ ಕ್ರೀಡೆ ಸಹಕಾರಿ ಎಂದು ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಹಾಗೂ ಕೋತಂಬ್ರಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಟಿ. ಕುರಣಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯಲ್ಲಿ ಇತ್ತೀಚಿಗೆ ಬಿಎಸ್ಸಿ ಪ್ರಥಮ ವರ್ಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ತಪಸ್ಸಾಧನೆ ಇದ್ದಂತೆ. ಗುರಿಸಾಧಿಸಲು ಏಕಾಗ್ರ ಚಿತ್ತದಿಂದ, ಶ್ರದ್ಧೆಯಿಂದ ಅಧ್ಯಯನ ನಿರತರಾಗಬೇಕು. ವಿದ್ಯಾರ್ಥಿಗಳು ಸದೃಢರಾಗರಬೇಕಾದರೆ ದುಶ್ಚಟಗಳಿಂದ ದೂರಬೇಕು. ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮಾನಸಿಕ ರೋಗದಿಂದ ಬಳಲುತ್ತಿರುವದು ವಿಷಾದಕರ ಸಂಗತಿ ಎಂದರು.
250 ಕೋಟಿ ಕೈಗಳು ದುಡಿದರೆ ನಮ್ಮ ದೇಶದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು. ದುಡಿಯದೇ ತಿನ್ನುವ, ಓದದೇ ಮಲಗುವ ಮನೋಭಾವವುಳ್ಳವರಾಗದೇ ಮರು ಉತ್ಪಾದನೆ ಮಾಡುವ ಶ್ರಮಿಕ ಸಂಸ್ಕೃತಿ ಹುಟ್ಟು ಹಾಕಬೇಕು. ಸಾಂಸ್ಕೃತಿಕ ಪರಂಪರೆಯುಳ್ಳ ಈ ದೇಶದಲ್ಲಿ ಆಚಾರದಂತೆ ವಿಚಾರ, ವಿಚಾರದಂತೆ ಆಚಾರವುಳ್ಳರಾಗಿ ನಡೆದುಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಭಾರತ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕಲು ಸಾಧ್ಯ ಎಂದರು.
ಪ್ರಾ. ಎಸ್.ಎಸ್. ಯಂಕಂಚಿ ಮಾತನಾಡಿ, ವಿದ್ಯಾರ್ಥಿಗಳ ಅಂತರಂಗದಲ್ಲಿ ಅಮೂಲ್ಯ ವಜ್ರಸಮಾನ ಭಾವನೆಗಳು ಹುದುಗಿರುತ್ತದೆ. ಅವುಗಳನ್ನು ನಾವು ದೇಶ ವಿದೇಶಗಳಲ್ಲಿ ಹುಡುಕಲು ಅಲೆದಾಡಬೇಕಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿಯ ಚೇರ್ಮನ್ ಡಾ. ವಿ.ಐ. ಕುರಗೋಡ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಎಸ್.ಜೆ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೊ. ಎಂ.ಬಿ. ಚನ್ನಪ್ಪಗೌಡರ, ಎಂ.ಎಂ. ನರಗುಂದ ಮುಂತಾದವರು ಉಪಸ್ಥಿತರಿದ್ದರು. ಅಕ್ಷತಾ ತೋಟಗೇರ ಪ್ರಾರ್ಥಿಸಿದರು. ಬಸವರಾಜ ಅಂಗಡಿ ಸ್ವಾಗತಿಸಿದರು. ನಾಜೀಶ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು.
250 ಕೋಟಿ ಕೈಗಳು ದುಡಿದರೆ ನಮ್ಮ ದೇಶದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು. ದುಡಿಯದೇ ತಿನ್ನುವ, ಓದದೇ ಮಲಗುವ ಮನೋಭಾವವುಳ್ಳವರಾಗದೇ ಮರು ಉತ್ಪಾದನೆ ಮಾಡುವ ಶ್ರಮಿಕ ಸಂಸ್ಕೃತಿ ಹುಟ್ಟು ಹಾಕಬೇಕು. ಸಾಂಸ್ಕೃತಿಕ ಪರಂಪರೆಯುಳ್ಳ ಈ ದೇಶದಲ್ಲಿ ಆಚಾರದಂತೆ ವಿಚಾರ, ವಿಚಾರದಂತೆ ಆಚಾರವುಳ್ಳರಾಗಿ ನಡೆದುಕೊಳ್ಳಬೇಕು.
- ಡಾ. ಎಂ.ಟಿ. ಕುರಣಿ,
ಪ್ರಾಚಾರ್ಯ