ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪುರಸಭೆಯಿಂದ ಕೋತಿ ಸೆರೆ

Mainashree
Updated On : 23 Sept 2013, 11:31 am

ಗಜೇಂದ್ರಗಡ: ಆಹಾರ ಅರಸಿ ಕಾಡಿನಿಂದ ಊರೊಳಗೆ ನುಗ್ಗಿದ ಮಂಗಗಳು ಜನರಿಗೆ ತೀವ್ರ ತೊಂದರೆ ನೀಡುತ್ತಿವೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳೀಯ ಪುರಸಭೆ ಸಿಬ್ಬಂದಿ ಭಾನುವಾರ ಪಟ್ಟಣದ ಹಳೆ ಪ್ರವಾಸಿ ಮಂದಿರದ ಮರಗಳಲ್ಲಿ ಬೀಡುಬಿಟ್ಟ ಮಂಗಗಳನ್ನು ಹಿಡಿಯುವ ಕಾರ್ಯಾಚರಣೆಗೆ ಮುಂದಾದರು.
ಬರದಿಂದಾಗಿ ಕಾಡಿನಲ್ಲಿ ಆಹಾರ ಸಿಗದೆ ಊರಿನತ್ತ ಬಂದ ವಾನರ ಸೈನ್ಯಕ್ಕೆ ಇಲ್ಲಿಯೂ ಬರದ ಛಾಯೆ ಎದುರಾಗಿದೆ. ಹೀಗಾಗಿ, ಅನಿವಾರ್ಯವಾಗಿ ಕಂಡ ಕಂಡ ಮನೆಗಳಿಗೆ ನುಗ್ಗಿ, ಸಿಕ್ಕಿದ್ದನ್ನು ಬಾಚಿಕೊಂಡು ತಮ್ಮ ಉದರ ತುಂಬಿಸಿಕೊಳ್ಳುತ್ತಿರುವ ಕೋತಿಗಳ ಚೇಷ್ಟೆಗೆ ನಾಗರಿಕರು ಬೇಸತ್ತಿದ್ದರು. ಪುರಸಭೆ ಸಿಬ್ಬಂದಿ ಭಾನುವಾರ ಬೆಳಗ್ಗೆ ಮಂಗಗಳನ್ನು ಹಿಡಿಯಲು ಬಲೆ ಬೀಸಿದರು. ಎಂಟು ತಾಸು ಕಾರ್ಯಾಚರಣೆ ನಡೆಸಿ, 25ಕ್ಕೂ ಅಧಿಕ ಕೋತಿ ಸೆರೆ ಹಿಡಿದು ಕಪ್ಪತ್ತಗುಡ್ಡಕ್ಕೆ ಸಾಗಿಸಿದರು. ಮಂಗಗಳು ಬಲೆಯೊಳಗೆ ಬೀಳುವುದು ನೋಡಲು ಸಾಕಷ್ಟು ಜನ ಬಂದಿದ್ದರಿಂದ ಕಾರ್ಯಾಚರಣೆಗೆ ಕೆಲ ಸಮಯ ಅಡ್ಡಿ ಉಂಟಾಗಿತ್ತು ಎಂದು ಪುರಸಭೆ ಆರೋಗ್ಯಾಧಿಕಾರಿ ಎಂ.ಬಿ. ನಿಡಶೇಶಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement