ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ಕಾರಗಳು ಮಿತವ್ಯಯ ಮಂತ್ರ ಪಠಿಸಲಿ

Mainashree
Updated On : 23 Sept 2013, 11:31 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಸೆ. 22
ದಿನದಿಂದ ದಿನಕ್ಕೆ ರುಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದರಿಂದ ಸರ್ಕಾರಗಳು ಮಿತವ್ಯಯ ಮಂತ್ರವನ್ನು ಪಠಿಸಬೇಕಿದೆ. ಅನಾವಶ್ಯಕವಾಗಿರುವ ಖರ್ಚುಗಳಿಗೆ ಕಡಿವಾಣ ಹಾಕಿ ಜನರು ದುಡಿದು ಉಣ್ಣುವ ಪ್ರವೃತ್ತಿಯತ್ತ ನಡೆದರೆ ರುಪಾಯಿ ಮೌಲ್ಯ ಮತ್ತೆ ಚಿಗುರುವ ಸಾಧ್ಯತೆಗಳಿವೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಈಚೆಗೆ ಅನ್ನದಾನೀಶ್ವರ ಮಠದಲ್ಲಿ ನಡೆದ 1686 ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸರ್ಕಾರಗಳ ಅನೇಕ ಯೋಜನೆಗಳಿಂದ ಜನರು ದುಡಿಯುದನ್ನೇ ಮರೆಯುತ್ತಿದ್ದಾರೆ. ದುಡಿದವನಿಗೆ ಮಾತ್ರ ಉಣ್ಣುವ ಹಕ್ಕಿದೆ ಎಂದು ಹೇಳಿದ ಬಸವಣ್ಣ ಶ್ರೇಷ್ಠ ಅರ್ಥಶಾಸ್ತ್ರಜ್ಞ. ದುಡಿಯದೇ ಉಣ್ಣುವ ಜನರಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಇದರಿಂದ ರುಪಾಯಿ ತನ್ನ ಮೌಲ್ಯವನ್ನು ಕಳೆದುಕೊಂಡು ದೇಶಕ್ಕೆ ಹಿನ್ನಡೆಯಾಗುತ್ತದೆ. ಪ್ರತಿದಿನ ಪೆಟ್ರೋಲ್ ಮತ್ತು ಡಿಸೇಲ್‌ಗೆ ಪರದೇಶಕ್ಕೆ ಕೈವೊಡ್ಡುತ್ತಿರುವ ನಾವು ಅದರ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು.
ಸುಮಾರು 40 ವರ್ಷದ ಹಿಂದೆ ಊರಿಗೊಂದು ಕಾರು ಕಂಡುಬರುತ್ತಿತ್ತು. ಆದರೆ ಈಗ ಮನೆಗೆ 2-3 ಕಾರುಗಳು ಬಳಕೆಯಾಗುತ್ತಿವೆ. ಇದರಿಂದ ನಮ್ಮ ದೇಶದ ಪರಿಸ್ಥಿತಿ ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗುತ್ತಿದೆ. ಆದ್ದರಿಂದ ಚೀನಾ ದೇಶದಲ್ಲಿ ಸೈಕಲ್ ಬಳಕೆ ಜಾಸ್ತಿ ಆಗುತ್ತಿರುವಂತೆ ಭಾರತದಲ್ಲಿಯೂ ಸೈಕಲ್ ಬಳಕೆಗೆ ಹೆಚ್ಚಿನ ಒತ್ತು ಕೊಡಬೇಕು. ಸರ್ಕಾರ ಸಚಿವರಿಗೆ ಮತ್ತು ಶಾಸಕರಿಗೆ ಮಾಡುತ್ತಿರುವ ಹೆಚ್ಚಿನ ಖರ್ಚಿಗೆ ಕಡಿವಾಣ ಹಾಕಬೇಕು. ಸರ್ಕಾರಗಳು ಜನರ ದುಡಿದು ತಿನ್ನುವ ನಿಟ್ಟಿನಲ್ಲಿರುವ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.
ಕಾತರಕಿಯ ರಾಜೇಶ್ವರಿ ಶ್ರೀಗಳು ಮಾತನಾಡಿ, ಮುಂಡರಗಿ ಶ್ರೀಮಠ ಈ ಭಾಗದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ ಕ್ರಾಂತಿಯನ್ನೆ ಮಾಡಿ ರಾಜ್ಯದಲ್ಲಿಯೇ ಹೆಸರು ಮಾಡಿದೆ. ಜನರ ಉದ್ಧಾರಕ್ಕಾಗಿಯೇ ತಮ್ಮ ಜೀವನವನ್ನು ಸವೆಸುತ್ತಿರುವ ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.
ನಿರಂಜನ ದೇವರು, ಶಿವಲಿಂಗ ದೇವರು, ಶಂಕ್ರಪ್ಪ ಬಾರಿಕಾರಿ, ದೇವಪ್ಪ ರಾಮೇನಹಳ್ಳಿ, ಎಂ.ಎಸ್. ಶಿವಶೆಟ್ಟರ, ಎಸ್.ಬಿ. ಹಿರೇಮಠ, ಆರ್.ಅರ್. ಹೆಗ್ಗಡಾಳ, ವಿ.ಸಿ. ಹಂಚಿನಾಳ ಉಪಸ್ಥಿತರಿದ್ದರು.
ಚನ್ನವೀರಯ್ಯ ಹಿರೇಮಠ ಪ್ರಾರ್ಥಿಸಿದರು. ಮಾಹಾಲಿಂಗಯ್ಯ ಹಿರೇಮಠ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement