ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಹಕಾರಿ ಸಂಘಗಳಿಂದ ಪ್ರಗತಿ: ಶಿದ್ದಲಿಂಗ ಶ್ರೀ

Mainashree
Updated On : 23 Sept 2013, 11:27 am

ಕನ್ನಡಪ್ರಭ ವಾರ್ತೆ, ನರಗುಂದ, ಸೆ. 22
ದೇಶದ ಪ್ರಗತಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ ಎಂದು ಪಂಚಗ್ರಹ ಗುಡ್ಡ ಹಿರೇಮಠದ ಶಿದ್ದಲಿಂಗ ಶ್ರೀಗಳು ಹೇಳಿದರು.
ಪಟ್ಟಣದ ಬಾಬಾಸಾಹೇಬ ಕೋ-ಆಪ್, ಕ್ರೆಡಿಟ್ ಸೊಸೈಟಿಯ 14ನೇ ವಾರ್ಷಿಕ ಮಹಾಸಭೆ ಉದ್ಘಾಟಸಿ ಅವರು ಮಾತನಾಡಿದರು.
ಸೊಸೈಟಿ 15 ವರ್ಷಗಳಲ್ಲಿ 800 ಸದಸ್ಯರನ್ನು ಹೊಂದಿ, ರು. 2.50 ಕೋಟಿ ವ್ಯವಹಾರ ನಡೆಸುತ್ತಿರುವುದು ಸಂತೋಷದ ಸಂಗತಿ ಎಂದರು.
ಸೊಸೈಟಿ ಅಧ್ಯಕ್ಷ ಜಿ.ಬಿ. ಕುಲಕರ್ಣಿ, ಉಪಾಧ್ಯಕ್ಷ ಎಂ.ಎಸ್. ಕರಿಗೌಡರ, ನಿರ್ದೇಶಕ ವಿಠ್ಠಲ ಶಿಂದೆ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಾಂತ ಇನಾಮದಾರ, ಸಂಗಡಿಗರು ಸಂಗೀತ ಕಾರ್ಯಕ್ರಮ ನೀಡಿದರು.
ಬಿ.ಕೆ. ಗುಜಮಾಗಡಿ, ವಿ.ಎಂ. ಆನೆಗುಂದಿ, ಎಸ್.ಜಿ. ಅಂಗಡಿ, ಎನ್.ಡಿ. ಪಾಟೀಲ, ಕೆ.ಜಿ. ದೊಡ್ಡಮನಿ, ಪ್ರಬಂಧಕ ನಾರಾಯಣ ಜಂತ್ಲಿ, ಸತ್ಯರಡ್ಡಿ, ಸಂಭಾಜಿ ಶಿತೋಳಿ, ಶಂಕರಗೌಡ ಪಾಟೀಲ, ಮಹೇಶ್ವರಯ್ಯ ಸುರೇಬಾನ ಹಾಜರಿದ್ದರು.
ರಮೇಶ ಮೋಟಿ ಸ್ವಾಗತಿಸಿ, ನಿಂಗಪ್ಪ ನಾಗನೂರ ನಿರೂಪಿಸಿದರು. ಸಂಗಣ್ಣ ಕಳಸಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement