ಸಿಬ್ಬಂದಿ ಶ್ರಮದಿಂದ ಬ್ಯಾಂಕ್ ಅಭಿವೃದ್ಧಿ: ಹಿರೇಮನಿ
ಗಜೇಂದ್ರಗಡ: ಬ್ಯಾಂಕ್ಗಳ ಅಭಿವೃದ್ಧಿಯಲ್ಲಿ ಸಿಬ್ಬಂದಿ ಸಹಕಾರ, ಕರ್ತವ್ಯ ಪ್ರಜ್ಞೆ ಅತ್ಯಮೂಲ್ಯ ಎಂದು ದಿ ಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂಗನಬಸಪ್ಪ ಹಿರೇಮನಿ ಹೇಳಿದರು.
ಭಾನುವಾರ ಬ್ಯಾಂಕಿನ ಸಭಾ ಭವನದಲ್ಲಿ ನಡೆದ 100ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಸಾರ್ವಜನಿಕರ ಮನ್ನಣೆ ಗಳಿಸಿದೆ. ಆರ್ಥಿಕ ಹಿಂಜರಿತದ ಮಧ್ಯೆ ಬ್ಯಾಂಕ್ ರು. 23.01 ಲಕ್ಷಕ್ಕೂ ಅಧಿಕ ಲಾಭ ಗಳಿಸುವ ಮೂಲಕ ಸಹಕಾರ ಮಹಾಮಂಡಲದ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಉಪಾಧ್ಯಕ್ಷ ಎಸ್.ಎಸ್. ಪಟ್ಟೇದ ಮಾತನಾಡಿ, ವಿಶ್ವಸಂಸ್ಥೆ 2012ನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷವನ್ನಾಗಿ ಆಚರಿಸಿದೆ. ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿಗಳನ್ನು ತರುವ ಮೂಲಕ ಸಹಕಾರಿ ವಲಯಕ್ಕೆ ಅನುಕೂಲ ಕಲ್ಪಿಸಿದೆ. ಗ್ರಾಹಕರು ಬ್ಯಾಂಕ್ ಸೇವೆ ಸದ್ವಿನಿಯೋಗ ಮಾಡಿಕೊಂಡು, ಸಂಸ್ಥೆ ಉನ್ನತಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಪಿ.ಎಸ್. ಕಡ್ಡಿ, ಪಿ.ಬಿ. ಮ್ಯಾಗೇರಿ, ಪಿ.ವೈ. ತಳವಾರ, ಎಪಿಎಂಸಿ ಶಾಖೆ ವ್ಯವಸ್ಥಾಪಕ ಐ.ಕೆ. ಬೇಲೇರಿ, ಎಂ.ಎಸ್. ಇಂಡಿ, ವಿ.ಎಸ್. ಹೊನವಾಡ, ಜೆ.ಜಿ. ಮಾಳಗಿ, ಪಿ.ಸಿ. ಸವಣೂರ, ಸಿ.ಎಚ್. ಹುಲ್ಲಣ್ಣನವರ, ಬಿ.ವೈ. ತಳವಾರ, ಎಸ್.ಎಸ್. ಕುಂಬಾರ, ಎಸ್.ವಿ. ರಂಜಣಗಿ, ಪಿ.ಎಸ್. ಚಿಕ್ಕಮಠ, ಎಸ್.ಕೆ. ಇಂಡಿ, ಇದ್ದರು. ವ್ಯವಸ್ಥಾಪಕ ಆರ್.ಎಸ್. ಹೊಸಂಗಡಿ ವಾರ್ಷಿಕ ವರದಿ ಮಂಡಿಸಿದರು. ಸಿದ್ದಣ್ಣ ಬಂಡಿ ಸ್ವಾಗತಿಸಿದರು. ಎನ್.ಕೆ. ಹೊಸಂಗಡಿ ನಿರೂಪಿಸಿದರು. ವಿ.ಎಸ್. ನಂದಿಹಾಳ ವಂದಿಸಿದರು.