ಕ್ರೀಡಾಪಟು ಪ್ರೋತ್ಸಾಹಿಸಿ: ಬಸವಂತಪ್ಪ ತಳವಾರ
ರೋಣ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಅಗತ್ಯ ನೆರವು ಮತ್ತು ಪ್ರೋತ್ಸಾಹ ನೀಡುವುದು ಅತ್ಯಂತ ಮುಖ್ಯವಾಗಿದೆ ಎಂದು ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹುನಗುಂಡಿ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಅವರು ಈಚೆಗೆ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಬನಶಂಕರಿದೇವಿ ಗ್ರಾಮೀಣಾಭಿವೃದ್ದಿ ಹಾಗೂ ವಿವಿದೋದ್ದೇಶಗಳ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ತಾಪಂ ಸದಸ್ಯ ಶಿವಕುಮಾರ ಸಾಲಮನಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಸರಿಯಾದ ತರಬೇತಿ ನೀಡಬೇಕು. ರಾಷ್ಟ್ರ ಮತ್ತು ಅಂತರಾಷ್ಟ್ರದಲ್ಲಿ ಗ್ರಾಮೀಣ ಕ್ರೀಡಾ ಪಟುಗಳೇ ಮೇಲಗೈ ಸಾಧಿಸುತ್ತಿವೆ ಎಂದರು.
ಆರ್.ಎಸ್. ಕೆಂಗಾರ, ವೆಂಕನಗೌಡ ಬಾವಿ, ಮಾಳಗೊಂಡಪ್ಪ ಬಾವಿ, ಎನ್.ವಿ. ಮೇಟಿ, ನಾಗನಗೌಡ ಸಕ್ಕರಗೌಡ್ರ, ಭೀಮನಗೌಡ ಸಕ್ಕರಗೌಡ್ರ, ಶಂಕರಗೌಡ ಬಾವಿ ಮುಂತಾದವರು ಇದ್ದರು. ಶಂಕರಗೌಡ ತಿಮ್ಮನಗೌಡ್ರ ನಿರೂಪಿಸಿ, ವಂದಿಸಿದರು.