ಪಂ.ಪುಟ್ಟರಾಜರ ತೃತೀಯ ಪುಣ್ಯಸ್ಮರಣೆ
ಗದಗ: ಅಂಧರ ಬಾಳಲ್ಲಿ ಸಂಗೀತ, ಸಾಹಿತ್ಯದ ಮೂಲಕ ಬೆಳಕನ್ನು ಚೆಲ್ಲಿ ನಾಡಿಗೆ ಪರಿಚಯಿಸಿದ ನಡೆದಾಡುವ ದೇವರು ಪಂ.ಪುಟ್ಟರಾಜ ಗವಾಯಿಗಳು ಪ್ರತಿಯೊಬ್ಬರ ಹೃದಯದಲ್ಲಿ ಮನೆ ಮಾಡಿದ್ದಾರೆ ಎಂದು ಅಡ್ನೂರ ದಾಸೋಹಮಠದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗಂಗಾಪುರ ಪೇಟೆ ಯುವಕ ಮಂಡಳ ಹಾಗೂ ಗಜಾನನೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ಪಂ. ಪುಟ್ಟರಾಜ ಗವಾಯಿಗಳ ತೃತೀಯ ಪುಣ್ಯಸ್ಮರಣೆ ಹಾಗೂ ಕಲ್ಲಯ್ಯಜ್ಜನವರ 228ನೇ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತ್ರಿಭಾಷಾ ಪಂಡಿತರಾದ ಪುಟ್ಟರಾಜರು ಬಾಹ್ಯ ದೃಷ್ಟಿಹೀನರಾದರೂ ಅಂತದೃಷ್ಟಿಯಿಂದ ಇಡೀ ಜಗತ್ತನ್ನು ಸಂಚರಿಸಿ ಸಾವಿರಾರು ಅಂಧ ಮಕ್ಕಳಿಗೆ ದಾರಿದೀಪರಾಗಿದ್ದಾರೆ ಎಂದರು.
ಕಲ್ಲಯ್ಯಜ್ಜನವರಿಗೆ ತುಲಾಭಾರ ನೆರವೇರಿಸಲಾಯಿತು. ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸುಜಾತಾ ಭಾಂಡಗೆ, ಶಂಕ್ರಪ್ಪ ಚಿಂಚಲಿ, ಐ.ಎಫ್. ಬೆಟಗೇರಿ, ಸುನೀಲ ಅಬ್ಬಿಗೇರಿ, ಹನುಮಂತಪ್ಪ ಕಕ್ಕೇರಿ, ಮಂಜುನಾಥ ಹಳ್ಳಿಕೇರಿ, ಮಾಬುಸಾಬ, ಗಜಾನನೋತ್ಸವ ಸಮಿತಿ ಅಧ್ಯಕ್ಷ ಮಹಾಂತೇಶ ಬೆಳದಡಿ ಅವರನ್ನು ಸನ್ಮಾನಿಸಲಾಯಿತು.
ಬಸವರಾಜ ಬೆಳದಡಿ ಅಧ್ಯಕ್ಷತೆ ವಹಿಸಿದ್ದರು. ಗಣಪತಸಾ ಹಬೀಬ, ಅನಿಲ ಸಿದ್ದಮ್ಮನಹಳ್ಳಿ, ದೇವರಾಜ ಕವಲೂರ, ಮೋಹನ ಇಮರಾಪೂರ, ರಮೇಶ ತೋಟದ, ರವಿ ಮಾನೇದ, ಪ್ರಕಾಶ ಬೆಟಗೇರಿ ಶೇಖಪ್ಪ ಹುಳ್ಳಿ, ಬಸವರಾಜ ಬಹದ್ದೂರಬಂಡಿ ಮುಂತಾದವರು ಇದ್ದರು. ನಂತರ ಅನ್ನಸಂತರ್ಪಣೆ ಜರುಗಿತು. ಬಸವರಾಜ ಹಿಕ್ಕಲಗುತ್ತಿ ಸ್ವಾಗತಿಸಿದರು. ಕುಮಾರ ತೋಟದ ನಿರೂಪಿಸಿದರು. ಕೃಷ್ಣ ಹಡಪದ ವಂದಿಸಿದರು.