ಪರಿಹಾರ ಚೆಕ್ ವಿತರಣೆ: ಸಾಂತ್ವನ
ಗದಗ: ಈಚೆಗೆ ನಗರದ ವಾರ್ಡ್ 17ರ ಬಸವೇಶ್ವರ ನಗರದ ಶಹಪುರಪೇಟೆ ಬಡಾವಣೆಯಲ್ಲಿ ಶಾಲಾ ಬಸ್ ಚಾಲಕನ ಅಚಾತುರ್ಯದಿಂದ ಸಾವನ್ನಪ್ಪಿದ ಬಾಲಕ ಗೋಪಾಲ ಭಜಂತ್ರಿ ಅವರ ಮನೆಗೆ ಸೋಮವಾರ ನಗರಸಭೆ ಸದಸ್ಯ, ಯುವ ಮುಖಂಡ ಪೀರಸಾಬ ಕೌತಾಳ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಕುಟುಂಬಕ್ಕೆ ರು. 10 ಸಾವಿರದ ಪರಿಹಾರ ಚೆಕ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಕೌತಾಳ, ಸ್ಥಳೀಯ ಬಸವೇಶ್ವರ ನಗರದ ರಸ್ತೆಗಳೆಲ್ಲವೂ ಚಿಕ್ಕದಾಗಿರುವುದರಿಂದ ಈ ರೀತಿಯ ಅವಘಡ ನಡೆದಿದೆ. ವಾಹನ ಚಾಲಕರು ಈ ಭಾಗದಲ್ಲಿ ಸಂಚರಿಸುವ ವೇಳೆಯಲ್ಲಿ ವೇಗವಾಗಿ ಚಲಿಸದೇ ನಿಧಾನವಾಗಿ ಚಲಿಸಬೇಕು ಎಂದರು.
ಈ ಸಂದರ್ಭ ದೀಪಕ ರಾಯಚೂರ, ರಫೀಕ ಲಕ್ಕುಂಡಿ, ಮಾರುತಿ ಅಂಗಡಿ, ತಿಪ್ಪಣ್ಣ ಭಜಂತ್ರಿ, ಅಜಮತಅಲಿ ದಂಡಿನ, ಅಲ್ತಾಫ ಖಾನಾಪೂರ, ಮನೋಹರ ಬೇಂದ್ರೆ ಮುಂತಾದವರು ಇದ್ದರು.