ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಹಕಾರಿ ಸಂಘಗಳ ಸೇವೆ: ಎಂ.ಎ. ಬಟ್ಟೂರ ಪ್ರಶಂಸೆ

Lingaraj Badiger
Updated On : 24 Sept 2013, 11:05 am

ಕನ್ನಡಪ್ರಭ ವಾರ್ತೆ, ಮುಳಗುಂದ, ಸೆ. 23
ಜನರಿಂದ ಜನರಿಗಾಗಿ ಸದಾಕಾಲ ಸೇವೆಯಲ್ಲಿ ತೊಡಗಿಕೊಂಡ ಸಹಕಾರಿ ಸಂಘಗಳ ಕಾರ್ಯ ಇಂದಿನ ದಿನಮಾನಗಳಲ್ಲಿ ಶ್ಲಾಘನೀಯ ಎಂದು ಮುಳಗುಂದ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ಎಂ.ಎ. ಬಟ್ಟೂರ ಅಭಿಪ್ರಾಯಪಟ್ಟರು.
ಅವರು ಸೋಮವಾರ ಸ್ಥಳೀಯ ದಿ. ಮುಳಗುಂದ ಗ್ರಾಹಕರ ಸಹಕಾರಿ ಸಂಘದ 2012-13ರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲ ವರ್ಗದ ಜನರ ಸಹಕಾರದಿಂದ ಸಂಘ ಸ್ಥಾಪನೆಯಾಗಿದ್ದು, ಸಹಕಾರಿ ಸಂಘ ನಿಂತ ನೀರಾಗದೆ ಹರಿಯುವ ನೀರಿನಂತೆ ಹೊಸ ಹೊಸ ಆಯಾಮಗಳನ್ನು ಅಳವಡಿಸಿಕೊಂಡು ಸದಸ್ಯರು ಒಮ್ಮತದ ನಿರ್ಧಾರದಿಂದ ಸಂಘ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳನ್ನ ಪಡೆದುಕೊಂಡು ಉನ್ನತ ಮಟ್ಟಕ್ಕೆ ಸಂಘ ಬೆಳೆಯಲಿದ್ದು, ಸದಸ್ಯರು ಸಹಕಾರ ನೀಡುವುದು ಅವಶ್ಯಕವಾಗಿದೆ ಎಂದರು.
ಮೋಹನ ಮದ್ದಿನ ವಾರ್ಷಿಕ ವರದಿ ವಾಚಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಬಸವಣ್ಣೆಪ್ಪ ಉಜ್ಜಣ್ಣವರ, ದತ್ತು ಯಳವತ್ತಿ, ಸಿದ್ದಪ್ಪ ಶಿರಹಟ್ಟಿ, ಎಂ.ಎಚ್. ಕಣವಿ, ಸಿ.ಕೆ. ಭಜಂತ್ರಿ, ಚನ್ನವ್ವ ಶಿದ್ದನಗೌಡ, ಮಹದೇವಪ್ಪ ಕಣವಿ, ಅರುಣ ಆರೇರ, ಪ್ರಭು ಕೋಳಿವಾಡ, ಸಾದೇವ ಹುಲಿ, ದಲೀಲ, ರಾಜೇಸಾಬ ಹಮ್ಮಣ್ಣವರ, ಬಿ.ಎಂ. ದಿವಟರ, ಭಾಸ್ಕರ ಭಾಗಣ್ಣವರ, ಮುತ್ತಪ್ಪ ಕತ್ತಿ ಇದ್ದರು.
ಮೋಹನ ಮದ್ದಿನ ನಿರೂಪಿಸಿದರು. ಕಾರ್ಯದರ್ಶಿ ಬಸವರಾಜ ಬೈಲಪ್ಪನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement