ಗುಣಾತ್ಮಕ ಶಿಕ್ಷಣ ನೀಡಿ
ಮುಂಡರಗಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮುಖ್ಯ ವಾಹಿನಿಗೆ ಬರಲು ಸರ್ಕಾರಿ ಪ್ರೌಢಶಾಲೆಗಳು ಗುಣಾತ್ಮಕ ಶಿಕ್ಷಣ ನೀಡಬೇಕೆಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಈಚೆಗೆ ತಾಲೂಕಿನ ಮೇವುಂಡಿ ಗ್ರಾಮದಲ್ಲಿರುವ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿ.ಆರ್. ಗುಡಿಸಾಗರ, ಮಿಥುನ್‌ಗೌಡ ಪಾಟೀಲ, ರವಿ ದಂಡಿನ, ಜಿ.ಎಸ್. ಕೊರ್ಲಹಳ್ಳಿ, ವಿ.ಬಿ. ಸೋಮನಕಟ್ಟಿಮಠ, ಹಾಲಪ್ಪ ಹರ್ತಿ, ಗ್ರಾಪಂ ಅಧ್ಯಕ್ಷ ಹಾಲನಗೌಡ ಅಮರಗೋಳ, ಮಲ್ಲನಗೌಡ ಸಿಂಗಟಾಲೂರ, ವೀರನಗೌಡ ಕೊಂಬಳಿ, ಶರಣಪ್ಪ ಮುದಿಯಜ್ಜನವರ, ಹನಮಂತರಾವ್ ದಪ್ತರದಾರ, ಕೊಟ್ರಪ್ಪ ಸ್ವಾಗಿ, ಹನುಮಂತ ಕುಸಲಾಪುರ, ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ, ಜಿಪಂ ಅಭಿಯಂತರ ಕೆ.ಬಿ. ಗಂಜಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ, ಮುಖ್ಯೋಪಾಧ್ಯಾಯ ಶರಣು ಗೋಗೇರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.