ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗುರು ನೆನಪಿನಂಗಳದಲ್ಲಿ ಉಳಿಯುವಂತಿರಬೇಕು

Lingaraj Badiger
Updated On : 25 Sept 2013, 11:18 am

ಕನ್ನಡಪ್ರಭ ವಾರ್ತೆ, ಗದಗ, ಸೆ. 24
ಗುರುಗಳು ಎಂದಿಗೂ ಶಿಕ್ಷಕರ, ಪಾಲಕರ ಮನಸ್ಸಿನಲ್ಲಿರಬೇಕು. ಅಂದಾಗ ಮಾತ್ರ ಗುರುಗಳಾಗಿ ಸೇವೆ ಸಲ್ಲಿಸಿದ್ದು ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ ಎಂದು ವಿಜಯಕಲಾ ಮಂದಿರ ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕ ಅಕ್ಕಿ ಹೇಳಿದರು.
ಅವರು ಈಚೆಗೆ ನಗರದ ವಿಜಯಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಆದರ್ಶ ವ್ಯಕ್ತಿತ್ವ ನಮ್ಮದಾಗಬೇಕಾದರೆ ಬದುಕಿನ ಹಲವು ಬಯಕೆಯನ್ನು ತ್ಯಾಗ ಮಾಡಬೇಕು. ಮತ್ತು ಎಲ್ಲರಿಗೂ ವೃತ್ತಿಯ ಮೇಲೆ ಗೌರವವೊಂದಿದ್ದರೆ ಸದಾಕ್ರಿಯಾಶೀಲನಾಗುವುದರೊಂದಿಗೆ ಸಜ್ಜನ ಸಮಾಜವನ್ನು ನಿರ್ಮಾಣ ಮಾಡಬಹುದು. ಆದ್ದರಿಂದ ಈ ದೇಶದ ಭವಿಷ್ಯ ಗುರು ಎಂಬ ಶಕ್ತಿಯ ಮೇಲೆ ನಿಂತಿದೆ ಎಂದರು.
ಸತೀಶ ಶಾಬಾದಿಮಠ ಮಾತನಾಡಿ, ಕಲೆ, ಕಲಾವಿದರ ಪೋಷಣೆಗಾಗಿ ಸದಾ ನಮ್ಮ ಹಿರಿಯರು ಸಹಕಾರ ನೀಡುತ್ತಾ ಬಂದಿದ್ದಾರೆ. ನಾವು ಸಹ ಕಲಾ ವಿಕಾಸಕ್ಕಾಗಿ ಶ್ರಮಿಸುತ್ತೇವೆ. ವಿದ್ಯಾರ್ಥಿಗಳು ಹಾಗೂ ಕಲಾವಿದರು ಈ ವಿಜಯಕಲಾ ಮಂದಿರದ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಕಲಾವಿದ ವಿ.ವೈ. ಬಡಿಗೇರ ಮಾತನಾಡಿ, ಜ್ಞಾನ ಎಂಬುದು ನಿಂತ ನೀರಲ್ಲ ಅದು ಆತ್ಮದಿಂದ ಆತ್ಮಕ್ಕೆ ಹರಿಯುತ್ತಿರಬೇಕು. ಜ್ಞಾನ ಹೆಚ್ಚಾದಂತೆ ಅಂಧಕಾರ ಶಮನವಾಗುತ್ತದೆ. ಅಂತಹ ಜ್ಞಾನ ನೀಡುವ ಗುರುವಿಗೆ ಸದಾ ಚಿರಋಣಿಯಾಗಿರಿ ಎಂದರು. ಕಲಾವಿದ ಆರ್.ವಿ. ಹೆಗಡೆ, ಪ್ರೇಮಾ ಹಂದಿಗೋಳ, ಸಂತೋಷ ಅಕ್ಕಿ, ಸಿ.ವಿ. ಬಡಿಗೇರ, ಆರ್.ಡಿ. ಕಡ್ಲಿಕೊಪ್ಪ, ಇಂದ್ರಾ ಮಣಕವಾಡ, ನಾಗರಾಜ ಬಾಕಳೆ, ಸುನಿಲ ಮುಳಗುಂದ, ರಮೇಶ ಗಾರವಾಡ, ಶಿವು ದೊಡ್ಡಮನಿ, ರೇಷ್ಮಾ ಅಂಗಡಿ ಮುಂತಾದವರು ಇದ್ದರು. ಕನಕಾ ಪ್ರಾರ್ಥಿಸಿದರು. ರಾಜು ಎಚ್.ಬಿ. ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement