ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೈರ್ಮಲ್ಯ ಕಾಪಾಡುವ ಹೊಣೆ ಪೌರ ಕಾರ್ಮಿಕರದ್ದು

Lingaraj Badiger
Updated On : 25 Sept 2013, 11:18 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 24
ಪಟ್ಟಣದಲ್ಲಿನ ಮೂಲ ಸಮಸ್ಯೆಗಳನ್ನು ನಿರ್ವಹಣೆ ಮಾಡುವ ಪೌರ ಕಾರ್ಮಿಕರ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾಗಿದೆ. ನಗರ ಅಥವಾ ಪಟ್ಟಣವನ್ನು ಸುಂದರವಾಗಿಸುವಲ್ಲಿ ಪೌರ ಕಾರ್ಮಿಕರ ಶ್ರಮ ಅಗತ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ ಹೇಳಿದರು.
ಅವರು ಸೋಮವಾರ ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಪೌರ ಕಾರ್ಮಿಕ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಸಾಕಷ್ಟು ಕಾಳಜಿ ವಹಿಸಿಕೊಳ್ಳುವತ್ತ ಗಮನ ಹರಿಸಬೇಕು. ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರ್ಮಿಕರ ಬದುಕು ಹಸನಾಗುವಂತೆ ನಾವು ಮಾಡಬೇಕಾಗಿದೆ. ಪೌರಕಾರ್ಮಿಕರಲ್ಲಿ ಸಾಕಷ್ಟು ಜನ ದಿನಗೂಲಿ ನೌಕರಿಯಲ್ಲಿ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಅವರನ್ನು ಕಾಯಂಗೊಳಿಸುವ ಕಾರ್ಯವನ್ನು ಮಾಡಬೇಕಾಗಿದೆ. ನಿತ್ಯ ಪಟ್ಟಣವನ್ನು ಸ್ವಚ್ಛ ಮಾಡುವ ಕಾರ್ಯ, ನೀರು ಪೂರೈಸುವ ಕಾರ್ಯ, ಬೀದಿ ದೀಪಗಳ ನಿರ್ವಹಣೆ, ಕರ ವಸೂಲಿ, ನೈರ್ಮಲ್ಯ ಕಾಪಾಡುವ ಕಾರ್ಯವನ್ನು ಮಾಡುತ್ತ ಸಾರ್ವಜನಿಕರ ಬದುಕು ಹಸನಾಗಿಸುವ ನಿಮ್ಮ ಕಾರ್ಯ ಮೆಚ್ಚಬೇಕಾಗಿದೆ ಎಂದರು. ಉಪಾಧ್ಯಕ್ಷ ಎಂ.ಆರ್. ಪಾಟೀಲ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಸರ್ಕಾರ ನೀಡಿರುವ ಆರೋಗ್ಯ ಕಿಟ್‌ಗಳನ್ನು ಬಳಸಿಕೊಂಡು ಕೆಲಸಕ್ಕೆ ಹಾಜರಾಗಬೇಕು ಎಂದರು. ಆರೋಗ್ಯ ನಿರೀಕ್ಷಕ ಬದಿ, ಮಾಜಿ ಅಧ್ಯಕ್ಷ ಶಂಕ್ರಣ್ಣ ಅಂದಲಗಿ, ಜಯಕ್ಕ ಕಳ್ಳಿ, ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಪುರಸಭೆ ಸದಸ್ಯ ರಾಜು ಕುಂಬಿ, ಗುರುರಾಜ ಮೆಡ್ಲೇರಿ, ಮಹೇಶ ಹೊಗೆಸೊಪ್ಪಿನ, ಅನಿಲ ಮುಳಗುಂದ, ದಾದಾಪೀರ್ ಮುಚ್ಚಾಲೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಪುರಸಭೆಯ ಪೌರಕಾರ್ಮಿಕರಿಗೆ ರು. 2 ಸಾವಿರ ಪ್ರೋತ್ಸಾಹ ಧನದ ಚೆಕ್‌ನ್ನು ಮತ್ತು ಆರೋಗ್ಯದ ಕಿಟ್ ವಿತರಿಸಲಾಯಿತು. ಬಸವಣ್ಣೆಪ್ಪ ನಂದೆಣ್ಣವರ, ಕೋಟೆಪ್ಪ ಕಟ್ಟಿಮನಿ, ಬಿ.ಸಿ. ಬಣಕಾರ, ಪುರಸೆಭೆ ಸದಸ್ಯರು, ಸಿಬ್ಬಂದಿವರ್ಗ ಹಾಜರಿದ್ದರು. ಬಿ. ಮಂಜುನಾಥ ಸ್ವಾಗತಿಸಿ, ನಿರೂಪಿಸಿದರು. ಹಾದಿಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement