ಇಂದು ಅಡಿಗಲ್ಲು ಸಮಾರಂಭ
ಗಜೇಂದ್ರಗಡ: ಸ್ಥಳೀಯ ಸರ್ಕಾರಿ ಬಾಲಕರ ಪ್ರೌಢಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆಗೆ ಆರ್.ಎಂ.ಎಸ್.ಎ. ಅನುದಾನದಲ್ಲಿ ಮಂಜೂರಾದ ಕೊಠಡಿಗಳ ಕಟ್ಟಡದ ಅಡಿಗಲ್ಲು ಸಮಾರಂಭ ಸೆ. 26ರಂದು ಮಧ್ಯಾಹ್ನ 3 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ. ಶಾಸಕ ಜಿ.ಎಸ್. ಪಾಟೀಲ ಭೂಮಿಪೂಜೆ ನೆರವೇರಿಸುವರು. ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಶಾರಮ್ಮ ತಳವಾರ, ಶಾರದಾ ರಾಠೋಡ, ಸುಜಾತಾ ಚುಂಚಾ, ಮಕ್ತುಂಬಿ ಹಣಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಮುರ್ತುಜಾ ಡಾಲಾಯತ್, ಹುವಾಜಿ ಚಂದೂಕರ, ಪರಶುರಾಮ ಕಲಾಲ, ದಾದುಸಾಬ ಹಣಗಿ, ಹಸನ ತಟಗಾರ ಪಾಲ್ಗೊಳ್ಳುವರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.