ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಠ್ಯದಂತೆ ಪಠ್ಯೇತರ ಚಟುವಟಿಕೆ ಮುಖ್ಯ: ಹಿರೇಮಠ

Lingaraj Badiger
Updated On : 26 Sept 2013, 11:35 am

ಗದಗ: ವಿದ್ಯಾರ್ಥಿಯ ಜೀವನದಲ್ಲಿ ಪಠ್ಯಕ್ರಮದ ಅಭ್ಯಾಸದಂತೆ ಪಠ್ಯೇತರ ಚಟುವಟಿಕೆ ಅತ್ಯವಶ್ಯ ಎಂದು ಡಾ. ಪಿ.ಜಿ.ಎ.ಎಸ್. ಸಮಿತಿಯ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ ಹೇಳಿದರು.
ಅವರು ಈಚೆಗೆ ಪಿ.ಜಿ.ಎ.ಎಸ್. ಕಾಲೇಜಿನ ಆವರಣದಲ್ಲಿ ಗದಗ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಬಿ. ಗುಂಪಿನ ಪುರುಷರ ಹಾಗೂ ಮಹಿಳೆಯರ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಎಂ.ಕೆ. ಮರೆಗುದ್ದಿನವರ ಮಾತನಾಡಿ, ಕ್ರೀಡೆಯಲ್ಲು ಸೋಲು, ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದರು. ಅಧ್ಯಕ್ಷತೆಯನ್ನು ಪಂ. ಪಂಚಾಕ್ಷರ ಗವಾಯಿಗಳವರ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ ಹಿರೇಮಠ ವಹಿಸಿದ್ದರು. ಕುಮಾರಸ್ವಾಮಿ ಹಿರೇಮಠ, ವಿಜಯಮಹಾಂತೇಶ ಹೊಸಮಠ, ಪಿ.ಆರ್. ಹಿರೇಮಠ, ದೈಹಿಕ ಶಿಕ್ಷಕ ಎಫ್.ಬಿ. ಅಂಗಡಿ, ಎ.ಐ. ವಸ್ತ್ರದ, ಶೋಭಾ ಹಡಪದ, ಐ.ಆರ್. ಆರಟ್ಟಿ, ಪಿ.ಎಫ್. ಅಗಸಿಮನಿ, ಬಿ.ಎಸ್. ಪಾಟೀಲ, ವೈ.ಎನ್. ಒಶೇಕರ, ರವೀಂದ್ರಗೌಡ ಇದ್ದರು. ಡಾ. ರಾಜಶೇಖರ ದಾನರೆಡ್ಡಿ ನಿರೂಪಿಸಿದರು. ಹುಚ್ಚಣ್ಣವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement